ನವದೆಹಲಿ: ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮೋದಿ ಟೀ ಮಾರಲಷ್ಟೇ ಲಾಯಕ್ಕು ಎಂಬ ಹೇಳಿಕೆಯಿಂದ ಸ್ಪೂತರ್ಿ ಪಡೆದ ಜನತೆ ನಮೋ ಟೀ ಇಟ್ಟು ಮಾಲಿಕರಾಗುವತ್ತ ಧುಮುಕುತ್ತಿದ್ದರೆ ಕೇಂದ್ರ ಮಾತ್ರ ಟೀ ಸ್ಟಾಲ್ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಅಷ್ಟಕ್ಕೂ ಏನಾಯ್ತು: ದೇಶದಾದ್ಯಂತ ಟೀ ಸ್ಟಾಲ್ಗಳು ವ್ಯಾಪಕ ಪ್ರಚಾರ ಪಡೆಯುತ್ತಿದ್ದಂತೆ ಇದು ಮೋದಿ ಎಫೆಕ್ಟ್ ಎಂದು ಬಗೆದ ಕೇಂದ್ರ ಸರಕಾರ ಟೀ ಅಂಗಡಿಗಳ ಮೇಲೆ ಹದ್ದಿನ ಕಣ್ಣು ಇಡಲು ನಿರ್ಧರಿಸಿದೆ. ಈ ಬಗ್ಗೆ ತುತರ್ಾಗಿ ಕ್ಯಾಬಿನೆಟ್ ಮೀಟಿಂಗ್ ಕರೆದ ಸರಕಾರ ಟೀ ಅಂಗಡಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ. ಕಾಂಗ್ರೆಸ್ ಸರಕಾರವಿರುವ ರಾಜ್ಯಗಳಲ್ಲಿ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಸಂಪುಟ ಸಭೆಯಲ್ಲಿ ಕೆಲವು ಪ್ರಮುಖ ನಿಧರ್ಾರಗಳನ್ನು ಕೈಗೊಂಡಿದೆ. ಅದರಂತೆ ಕೇಂದ್ರದ ನಿಧರ್ಾರ ಕನರ್ಾಟಕ್ಕೂ ಅನ್ವಯವಾಗಲಿದೆ.
ಸರಕಾರಿ ಸ್ವಾಮ್ಯದ ಅಡುಗೆ ಅನಿಲ ಸರಬರಾಜು ನಿಲ್ಲಿಸಲು ನಿರ್ಧರಿಸಲಾಗಿದೆ.
ದಿನವೊಂದಕ್ಕೆ ಐದು ಲೀ. ಮಾತ್ರ ಹಾಲು ಲಭ್ಯವಾಗುವಂತೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಫ್ಯಾಕ್ಸ್ ಮೂಲಕ ಆದೇಶ ಕಳಿಸಲಾಗಿದೆ. ಇದರಂತೆ ಟೀ ಸ್ಟಾಲ್ಗಳಿಗೆ ಕಮಷರ್ಿಯಲ್ ದರದಲ್ಲಿ ಹಾಲು ವಿತರಿಸಲು ನಿರ್ಧರಿಸಲಾಗಿದೆ.
ಜನಪ್ರಿಯತೆ ಪಡೆಯುತ್ತಿರುವ ಟೀಸ್ಟಾಲ್ಗಳನ್ನು ಬೆಳಿಗ್ಗೆ ಏಳರಿಂದ ಸಂಜೆ ಐದರವರೆಗೆ ಅನ್ವಯವಾಗುವಂತೆ ಸೆಕ್ಷನ್ 144 ಹಾಕಲು ನಿರ್ಧರಿಸಲಾಗಿದೆ. ಇದರಂತೆ ಟೀ ಸ್ಟಾಲ್ಗಳ ಮುಂದೆ ಜನರು ಗುಂಪು ಸೇರುವುದನ್ನು ನಿಷೇಧಿಸಿದಂತಾಗಿದೆ.
ಟೀ ಸ್ಟಾಲ್ಗಳಿಗೆ ನೀರು ಮತ್ತು ವಿದ್ಯುತ್ಗಾಗಿ ಪ್ರತ್ಯೇಕ ಡಿಜಿಟಲ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ.
ಟೀ ಸ್ಟಾಲ್ಗಳು ಇನ್ನು ಮುಂದೆ ಲೈಸನ್ಸ್ ಹೊಂದಿರಬೇಕಾಗಿರುವುದು ಕಡ್ಡಾಯ ಎಂದು ಆದೇಶಿಸಿದೆ.
ಟೀ ಸ್ಟಾಲ್ಗಳಿಗೆ ದೇಣಿಗೆ ನೀಡಿದವರ ವಿರುದ್ಧ ಕಠಿಣ ಕ್ರಮ ಹಾಗೂ ತೆರಿಗೆ ಅಧಿಕಾರಿಗಳಿಂದ ಟೀ ಸ್ಟಾಲ್ಗಳ ಮೇಲೆ ಧಾಳಿ ನಡೆಸಲು ನಿದರ್ೇಶನ ನೀಡಲಾಗಿದೆ.
ಟೀ ಸ್ಟಾಲ್ಗಳ ಜಾಹೀರಾತು ನೀಡದಂತೆ ಜನಪ್ರಿಯತೆ ತಪ್ಪಿಸಲು ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಲು ನಿರ್ಧರಿಸಲಾಗಿದೆ.
ಟೀ ಅಂಗಡಿಗಳ ಜನಪ್ರಿಯತೆ ತಪ್ಪಿಸಲು ಆಯಾಯ ರಾಜ್ಯದ ಪಕ್ಷದ ಅಧ್ಯಕ್ಷರನ್ನೇ ಜವಾಬ್ದಾರರನ್ನಾಗಿ ಮಾಡಲು ನಿರ್ಧರಿಸಲಾಗಿದ್ದು ಇವರು ಕೇಂದ್ರಕ್ಕೆ ವರದಿಯನ್ನು ಒಪ್ಪಿಸಬೇಕು ಎಂದು ನಿದರ್ೇಶಿಸಲಾಗಿದೆ.
ಕೇಂದ್ರದ ಈ ನಿಧರ್ಾರದಿಂದ ಟೀ ರೇಟು ಏರುವ ಸಂಭವವಿದ್ದು ಇದು ನೇರವಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ.

