ಶಾಸಕರು ಆಯ್ಕೆ ಮಾಡಿದಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸಲು ಸಿದ್ಧ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಾರ್ಖಂಡ್ನಲ್ಲಿ ತಿಳಿಸಿದರು. ಇದೇ ವೇಳೆ ಮಾತಾನಾಡಿದ ರಾಹುಲ್ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ಅಭ್ಯಥರ್ಿಯನ್ನು ಘೋಷಿಸುವುದು ಸಮಂಜಸವಲ್ಲವಾದ್ದರಿಂದ ಹಾಗೆ ಮಾಡದೆ ಚುನಾವಣೆಯ ನಂತರವೇ ಪ್ರಧಾನಿ ಘೋಷಣೆ ಮಾಡುವುದಾಗಿ ಅವರು ಹೇಳಿದರು. ಕಾಂಗ್ರೆಸ್ ಮತ್ತು ಲಾಲೂ ಪ್ರಸಾದ್ ಯಾದವ್ರ ಆರ್ಜೆಡಿ ಪಕ್ಷ ಮೈತ್ರಿ ಬಗ್ಗೆ ಚಚರ್ೆ ನಡೆಸುತ್ತಿದ್ದು. ಶೀಘ್ರದಲ್ಲೇ ಒಂದು ನಿಧರ್ಾರಕ್ಕೆ ಬರುವುದಾಗಿ ತಿಳಿಸಿದರು. ಕೋಮುವಾದಿ ಪಕ್ಷಗಳನ್ನು ತಡೆಯುವ ಸಲುವಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಇದೇ ವೇಳೆ ರಾಹುಲ್ ಗಾಂಧಿ ತಿಳಿಸಿದರು
