ಕೈಕಂಬ : ಆಟಿ ಅನಿಷ್ಟದ ತಿಂಗಳಲ್ಲ ಎಂದು ಜಾನಪದ ವಿದ್ವಾಂಸರಾದ ಕೆ.ಕೆ.ಪೇಜಾವರರವರು ಹೇಳಿದರು. ಅವರು ಇತ್ತೀಚೆಗೆ ಕೈಕಂಬ ಕಂದಾವರ ಪದವಿನಲ್ಲಿ ಮುಂಡಾಲ ಸಮಾಜ (ರಿ.) ದ ವತಿಯಿಂದ ನಡೆದ ಆಟ-ಊಟ-ಕೂಟದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ ಆಟಿಯ ಆಚರಣೆಗಳು ತುಳುನಾಡಿನ ಸಂಸ್ಕøತಿಯ ಪ್ರತೀಕವಾಗಿದೆ ಎಂದರುಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಮೋನಪ್ಪ ಗುರಿಕಾರರವರು ಮಾತನಾಡುತ್ತಾ, ಮುಂಡಾಲ ಸಮಾಜ ಎಲ್ಲಾ ರಂಗಗಳಲ್ಲೂ ಬಲಗೊಳ್ಳಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋಡಿಕಲ್ರವರು ಮಾತನಾಡುತ್ತಾ ಸಮಾಜವನ್ನು ಸಂಘಟಿಸುವಲ್ಲಿ “ಆಟ-ಊಟ-ಕೂಟ” ಮಹತ್ತರ ಪಾತ್ರ ವಹಿಸುತ್ತದೆ ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಜಪೆ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ರಾಜಾರಾಮ್ರವರು ರಸ್ತೆ ಸುರಕ್ಷತೆ ಮತ್ತು ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿದರು.ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ, ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಅದ್ರಾಮೋನು, ತುಡರ್ ಕಲಾ ಸಮಾಜ ಸೇವಾ ಸಂಘ (ರಿ.)ದ ಅಧ್ಯಕ್ಷರಾದ ಯಶವಂತ ಸಾಲ್ಯಾನ್ರವರು ಉಪಸ್ಥಿತರಿದ್ದರು.
ಆಟ-ಊಟ-ಕೂಟದಲ್ಲಿ ಸ್ಥಳೀಯ ಸ್ಪರ್ಧೆಗಳು ನಡೆದಿದ್ದು, ಗೋಣಿ ಚೀಲ ಓಟ, ಪುರುಷರಲ್ಲಿ ಅಭಿಲಾಷ್ ಸೌಹಾರ್ದನಗರ (ಪ್ರಥಮ), ಚೇತನ್ ಕೊಳಂಬೆ (ದ್ವಿತೀಯ), ಮಹಿಳಾ ವಿಭಾಗದಲ್ಲಿ ಶೈಲಜಾ ಕೆ. ಕೈಕಂಬ (ಪ್ರಥಮ), ನಿಶ್ಮಿತಾ ಹಳೆಯಂಗಡಿ (ದ್ವಿತೀಯ).ಮಡಕೆ ಒಡೆಯುವುದು, ಪುರುಷರಲ್ಲಿ ಹರೀಶ್ ಕೊಳಂಬೆ, ಮಹಿಳೆಯರಲ್ಲಿ ಕಾವ್ಯ ಬೆಂಜನಪದವು, ಲಿಂಬೆ ಚಮಚದಲ್ಲಿ ಪುರುಷರ ವಿಭಾಗದಲ್ಲಿ ರಾಹುಲ್ ಪೊರ್ಕೊಡಿ (ಪ್ರಥಮ), ಅಖಿತ್ ಪರಾರಿ (ದ್ವಿತೀಯ), ಮಹಿಳಾ ವಿಭಾಗದಲ್ಲಿ ಶೈಲಜಾ ಕೆ. ಕೈಕಂಬ (ಪ್ರಥಮ) ನಯನಾ ವಾಮಂಜೂರು (ದ್ವಿತೀಯ) ಸೂಜಿನೂಲು ಮಕ್ಕಳವಿಂಗ್ ಯಶ್ವಿತಾ ಗುರುಪುರ (ಪ್ರಥಮ), ನಿಧಿ ಕಾಜಿಲ (ದ್ವಿತೀಯ), ಮಹಿಳಾ ವಿಭಾಗದಲ್ಲಿ ಕಾವ್ಯ ಬೆಂಜನಪದವು (ಪ್ರಥಮ), ನಯನಾ ವಾಮಂಜೂರು (ದ್ವಿತೀಯ) ಸಂಗೀತ ಕುರ್ಚಿ ರೋಹಿಣಿ ಕೈಕಂಬ (ಪ್ರಥಮ), ಅಕ್ಷತಾ ಕೈಕಂಬ (ದ್ವಿತೀಯ), ಬಾಲ್ ಪಾಸಿಂಗ್, ನಿತೇಶ್ ಕಂದಾವರ (ಪ್ರಥಮ), ಅನೀಶಾ ವಾಮಂಜೂರು (ದ್ವಿತೀಯ). ಹಗ್ಗ ಜಗ್ಗಾಟ, ಮಹಿಳೆಯರ ವಿಭಾಗ, ಪದವು ಫ್ರಂಡ್ಸ್ ಕೈಕಂಬ (ಪ್ರಥಮ), ಬಾರಗೇಶ್ವರ ಪಡು (ದ್ವಿತೀಯ). ಪುರುಷರ ವಿಭಾಗದಲ್ಲಿ ಜೀವನ್ ಜ್ಯೋತಿ ಪಡು (ಪ್ರಥಮ), ಬ್ರದರ್ಸ್ ಕೈಕಂಬ (ದ್ವಿತೀಯ) ಬಹುಮಾನಗಳನ್ನು ಪಡೆದುಕೊಂಡರು.
ನವೀನ್ ಸ್ಕಂದನಗರ ಪ್ರಾರ್ಥಿಸಿದರು. ಕು.ನಿಧಿ ಸ್ವಾಗತಿಸಿದರು. ಜಯಂತ್ ಕೊಳಂಬೆ ಬಹುಮಾನ ವಿತರಣೆ ನಡೆಸಿಕೊಟ್ಟರು. ಅಧ್ಯಕ್ಷರಾದ ಭರತ್ ಎಸ್.ಕರ್ಕೇರ ಮುಂದಿನ ಯೋಜನೆಗ¼ ಬಗ್ಗೆ ವಿವರಿಸಿದರು. ಕು.ನಯನಾ ವಾಮಂಜೂರು ಧನ್ಯವಾದಗಳನ್ನರ್ಪಿಸಿದರು. ವಿಠಲ್ ಪೇಜಾವರ ಮತ್ತು ಕು.ಶೈಲಜಾ ಕಾರ್ಯಕ್ರಮ ನಿರೂಪಿಸಿದರು.

