1. ಗುರುಪುರ ಬಸ್ ನಿಲ್ದಾಣದಲ್ಲಿ ಗುರುಪುರ ಸೇವಾ ಬ್ರಿಗೇಡ್ ಹಾಗೂ ಇತರರ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನಡೆಸಲಾಯಿತು. ಈ ಸಂದರ್ಭದಲ್ಲಿ ವಕೀಲ ಜಯಪ್ರಕಾಶ್ ಭಂಡಾರಿ, ಪುರಂದರ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.
2. ಕರಿಯಂಗಳ ಗ್ರಾಮ ಪಂಚಾಯತಿಯಲ್ಲಿ 71 ನೇ ಸ್ವಾತಂತ್ರೋತ್ಸವದ ದ್ವಜರೋಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಾವತಿ ನೆರವೇರಿಸಿದರು.
3. ಪೊಳಲಿ ವಿದ್ಯಾ ವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಇಲ್ಲಿಯ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯನಂದ ಅವರು ದ್ವಜರೋಹಣಗೈದರು. ಶಾಲಾ ಮುಖ್ಯೋಪದ್ಯಾಯ ಸುಬ್ರಾಯ ಕಾರಂತ್,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕುಮಾರ್ , ಕೇಶವ ಪೊಳಲಿ, ಮೋಹನ್ ಬಿಲ್ವಪತ್ರೆ,ಗಾ.ಪಂ. ಅಧ್ಯಕ್ಷೆ ಚಂದ್ರಾವತಿ, ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
4. ಪೊಳಲಿ ರಾಮಕ್ರಷ್ಣ ತಪೋವನದಲ್ಲಿ 71ನೇ ಸ್ವಾತಂತ್ರ್ಯೋತ್ಸವವನ್ನು ಸ್ವಾಮಿ ವಿವೇಕಚಯತನ್ಯಾನಂದ ಅವರು ದ್ವಜರೋಹಣ ನೆರವೇರಿಸಿದರು.
5. ಅಮ್ಮುಂಜೆ ಗ್ರಾಮ ಪಂಚಾಯತಿಯಲ್ಲಿ 71 ನೇ ಸ್ವಾತಂತ್ರೋತ್ಸವದ ದ್ವಜಾರೋಹಣ ವನ್ನು ಗ್ರಾ. ಪಂ.ಅಧ್ಯಕ್ಷೆ ಪ್ರೇಮಲತಾ ನೆರವೇರಿಸಿದರು.
6.ಪಲ್ಲಿಪಾಡಿ ಹಿರಿಯ ಪ್ರಾಥಮಿಕ ಶಾಲೆಯ 71 ನೇ ಸ್ವಾತಂತ್ರೋತ್ಸವದ ದ್ವಜಾರೋಹಣ ವನ್ನು ಕರಿಯಂಗಳ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ರಾವ್ ನೆರವೇರಿಸಿದರು.ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಗುಂಡಿಕುಮೇರ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
7 .ಅಮ್ಮುಂಜೆ ಅಂಗನವಾಡಿ ಕೇಂದ್ರದಲ್ಲಿ ದ್ವಜರೋಹಣವನ್ನು ಅಮುಂಜೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ನೆರವೇರಿಸಿದರು. ಅಂಗನವಾಡಿ ಶಿಕ್ಕಕಿ ಮತ್ತಿತರರು ಉಪಸ್ಥಿತರಿದ್ದರು.
8. ರಾಜರಾಜೇಶ್ವರೀ ಫ್ರೌಡ ಶಾಲೆ ಪೊಳಲಿ 71ನೇ ಸ್ವಾತಂತ್ರ್ಯೋತ್ಸವವದ ಧ್ವಜಾರೋಹಣವನ್ನು ಶಿಕ್ಷಕ ರಕ್ಷಕ ಸಂಘದ ಕಾರ್ಯಾಧ್ಯಕ್ಷ ಉಮೇಶ್ ಆಚಾರ್ಯ ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಉಮಾ, ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
9 . ತೆಂಕಬೆಳ್ಳೂರು ನಾಗಶ್ರೀ ಮಿತ್ರವೃಂದದ 71ನೇ ಸ್ವಾತಂತ್ರ್ಯೋತ್ಸವವದ ಧ್ವಜಾರೋಹಣವನ್ನು ಗಂಗಾಧರ ರೈ ಕಮ್ಮಾಜೆ ನೆರವೇರಿಸಿದರುನೀ ಸಂದರ್ಭದಲ್ಲಿ ಅನಂತರಾಮ ಹೇರಳ, ರೂಪಾ ನಾರಾಯಣ ನಾಯಕ್, ಪ್ರಕಾಶ್ ಬಡಗಬೆಳ್ಳೂರು, ತಿಮ್ಮಪ್ಪ, ತಿರುಮಲೇಶ ಮತ್ತಿತರರು ಉಪಸ್ಥಿತರಿದ್ದರು.
10 . ಬಾರಿಂಜೆ ಹೊೈಗೆ ಅಂಗನವಾಡಿ ಕೇಂದ್ರದಲ್ಲಿ ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ನೆರವೇರಿಸಿದರು.
11. ಬಡಗಬೆಳ್ಳೂರು ಆದಿಶಕ್ತಿ ದೇವಾಸ್ಥಾನದಲ್ಲಿ ಭಾರತೀಯ ನೌಕಾಪಡೆಯ ನಿವೃತ ಯೋಧ ಆಲ್ಬರ್ಟ್ ಡಿ ಸೋಜ ಧ್ವಜಾರೋಹಣ ನೆರವೇರಿಸಿದರು.ಕೃಷ್ಣಪ್ರಸಾದ್ ರೈ , ಸಂದೀಪ್ ಬೊಳ್ಳೂರು ಉಪಸ್ಥಿತರಿದ್ದರು.
