ಸೌಭಾಗ್ಯ ಮಿತ್ರಮಂಡಳಿಯ ಕಟ್ಟಡ ಉದ್ಘಾಟನೆ

ಸೌಭಾಗ್ಯ ಮಿತ್ರಮಂಡಳಿ ಮೂಡುಕೆರೆ ಕಂದಾವರ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಉದ್ಯಮಿ ಗೌತಮ್ ನೋರೋಹ್ನರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷೆಯನ್ನು ಶೇಖರ ಶೆಟ್ಟಿ ಬೈಲು ತೇಂಜ ವಹಿಸಿದ್ದರು. ಅತಿಥಿಗಳಾಗಿ ಶ್ರೀಧರ ಆಳ್ವ ಕಂದಾವರ ಬಾಳಿಕೆ, ಸುಜಿತ್ ಆಳ್ವ ಎತಮೊಗರು ಗುತ್ತು, ಉದಯ ಕೊಟ್ರಿಯಾಲ್, ಮ್ಯಾಕ್ಸಿ ಪಿಂಟೋ, ಮಿತ್ರ ಮಂಡಳಿಯ ಅಧ್ಯಕ್ಷರಾದ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಟ್ಟಡ ನಿಮರ್ಿಸಲು ಸ್ಥಳವನ್ನು ದಾನವಾಗಿ ನೀಡಿದ ಗೌತಮ್ ನೋರೋಹ್ನರವರನ್ನು ಸನ್ಮಾನಿಸಲಾಯಿತು. ಮತ್ತು ಮಿತ್ರ ಮಂಡಳಿಯ ಸದಸ್ಯರಾದ ಭಾಸ್ಕರ ಇವರನ್ನು ಸನ್ಮಾನಿಸಿದರು. ಮತ್ತು ನೂತನ ಕಟ್ಟಡ ನಿಮರ್ಿಸಲು ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮತ್ತು ಹಿರಿಯ ಮಾರ್ಗದರ್ಶಕರಾಗಿದ್ದು ನಮ್ಮನ್ನಗಲಿದ ದಿ.ಗೋಪಾಲ ಶೆಟ್ಟಿ, ದಿ.ಜೆ.ಎಸ್.ನೋರೋಹ್ನ, ದಿ.ಬಾಬು ಕೊಟ್ರಿಯಾಲ್ ಇವರನ್ನು ಮೌನ ಪ್ರಾರ್ಥನೆಯ ಮೂಲಕ ಸ್ಮರಿಸಲಾಯಿತು. ಸತೀಸ್ ಶೆಟ್ಟಿ ಸ್ವಾಗತಿಸಿದರು. ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.ನಂತರ ಅನ್ನ ಸಂತರ್ಪನೆ ನಡೆಯಿತು. ಸೌಭಾಗ್ಯ ಮಿತ್ರ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.4 vp  udgatane

 

By suddi9

Leave a Reply

Your email address will not be published. Required fields are marked *