ಸುದ್ಬದಿ9 ಬಜಪೆ :ಪೆರ್ಮುದೆಯ ಯಾದವ ಕೋಟ್ಯಾನ್ ಅವರು ಆರಾಧನೆ ಮಾಡಿಕೊಂಡು ಬಂದಿರುವ ಅಣ್ಣಪ್ಪ ಸ್ವಾಮಿ ದೈವದ ಗುಡಿಗೆ ಕಳ್ಳರು ನುಗ್ಗಿ 12ಲಕ್ಷ ಮೌಲ್ಯದ ಸೊತ್ತುಗಳು ಕಳವು ಮಾಡಿದ ಘಟನೆ ಗುರುವಾರ ಜುಲೈ 31ರಂದು ತಡರಾತ್ರಿ ನಡೆದಿದೆ.

1 (3)

 

 

3 (1)

4 (1)
ಅಣ್ಣಪ್ಪ ದ್ಯವಗಳ ವಿಗ್ರಹವು ಸೇರಿದಂತೆ ದೈವಸ್ಥಾನದ ಭಂಢಾರದಲ್ಲಿದ್ದ  ಆಭರಣಗಳನ್ನು ಕಳ್ಳರು ಕೊಂಡುಹೋಗಿದ್ದಾರೆ. ದೈವಸ್ಥಾನದಲ್ಲಿ ಸಿಸಿಟಿವಿ ಆಳವಡಿಸಿದ್ದು ದೈವಸ್ಥಾನದ ಹಿಂಬಾಗದಲ್ಲಿ ಬಂದ ಇಬ್ಬರು ಮುಸುಕುದಾರಿ ಕಳ್ಳರು ಕೃತ್ಯ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ದೈವಸ್ಥಾನದಲ್ಲಿದ್ದ ವಜ್ರಲೇಪಿತವಾದ ದೇವರ ಕಣ್ಣು, ಚಿನ್ನದ ಆಭರಣಗಳು, ಪಂಚಲೋಹದ ಪರಿಕರಗಳನ್ನು ಕಳ್ಳರು ಕೊಂಡೊಯ್ದಿದಿದ್ದಾರೆ. ಅವುಗಳ ಮೌಲ್ಯ ಸುಮಾರು 12ಲಕ್ಷ ಎಂದು ಅಂದಾಜಿಸಲಾಗಿದೆ. ಶುಕ್ರವಾರ ಬೆಳ್ಳಗಿನ ಜಾವ 3ಗಂಟಯ ಒಳಗೆ ಕಳವು ನಡೆದಿರಬಹುದೆಂದು ಬಜಪೆ ಠಾಣಾ ಪೋಲೀಸ್ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿ ಅವರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರೀಶಿಲನೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *