ಸುದ್ದಿ9ಕೈಕಂಬ : ಕರಂಬಾರು ಪೇಜಾವರ ಕುಕ್ಯಾನ್ ಕುಟುಂಬಿಕರ ನಾಗಬಣದಲ್ಲಿ ನಾಗನಿಗೆ ಹಾಲು ಎರೆದು ಸೀಯಾಳ ಅಭಿಷೇಕ ತಂಬಿಲ ಸೇವೆ ಜರುಗಿತು. ಕುಕ್ಯಾನ್ ಕುಟುಂಬದವರು ಜು.1ರಂದು ಬೆಳಗ್ಗೆ ನಾಗದೇವರ ಮೂಲಸ್ಥಾನಕ್ಕೆ ಹೋಗಿ ನಾಗದೇವರಿಗೆ ಭಕ್ತಿಯಲ್ಲಿ ಆರಾಧನೆ ಮಾಡಿಕೊಂಡು ಬಂದ ಮೂಲ ನಾಗದೇವರಿಗೆ ತಂಬಿಲ ಸೇವೆಗಳನ್ನು ಮಾಡಿ ಪ್ರಸಾದ ಸ್ವೀಕರಿಸಿದರು. ಸುಮಾರು 800ಕ್ಕೂ ಮಿಕ್ಕಿ ತಂಬಿಲ ಸೇವೆ ನಡೆಯಿತು.



