ಸುದ್ದಿ9ಮೂಡುಬಿದರೆ: ಬೈಹುಲ್ಲು ಲಾರಿಗೆ ಬೆಂಕಿ
ಮೂಡುಬಿದರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಅಲಂಗಾರು ಎಂಬಲ್ಲಿ ಬೈಹುಲ್ಲು ತುಂಬಿದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಬೆಂಕಿತಗುಲಿದ ಪರಿಣಾಮ ಲಾರಿ ಭಾಗಶಃ ಹಾನಿಗೊಂಡಿದೆ.
ಕಾಶಿಪಟ್ನದ ರೀಟಾ ಟ್ರಾನ್ಸ್ಫೊರ್ಟ್ನವರಿಗೆ ಸೇರಿದ ಲಾರಿ ಶನಿವಾರ ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಅಲಂಗಾರಿನ ಹೋಲಿ ರೋಜರಿ ಅಸ್ಪತ್ರೆ ಎದುರು ಸಾಗುತ್ತಿದ್ದಾಗ ವಿದ್ಯುತ್ ತಂತಿ ಸ್ಪಶರ್ಿಸಿ ಬೈಹುಲ್ಲಿಗೆ ಬೆಂಕಿ ತಗುಲಿದೆ. ಸುಮಾರು ಒಂದು ಘಂಟಗಳ ಕಾಲ ಅಲಂಗಾರು ಪರಿಸರದಲ್ಲಿ ಭಯದ ವಾತಾವರಣ ನಿಮರ್ಾಣವಾಯಿತು. ಬೆಂಕಿಯ ಪ್ರಮಾಣ ಹೆಚ್ಚಾದಾಗ ಭಯಭೀತರಾದ ಜನರು ಆಸ್ಪತ್ರೆಯಿಂದ ನೀರು ತಂದು ನಂದಿಸಲು ಯತ್ನಿಸಿದರು. ಬಳಿಕ ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿತು. ಈ ಸಂದರ್ಭದಲ್ಲಿ ಅಗ್ನಿಶಾಮಕದಲ್ಲಿ ನೀರು ಖಾಲಿಯಾದ ಕಾರಣ, ಸ್ಥಳೀಯ ನೀರಿನ ಟ್ಯಾಂಕರ್ಗಳಿಂದ ನೀರು ತಂದು ಬೆಂಕಿ ನಂದಿಸುವಲ್ಲಿ ಪ್ರಯ್ನಿಸಲಾಯಿತು. ಘಟನೆಯಲ್ಲಿ ಲಾರಿಯು ಭಾಗಶಃ ಹಾನಿಯಾಗಿದೆ. ಘಟನಾ ಸ್ಥಳದಲ್ಲಿ ಟ್ರಾನ್ಸ್ಫಾರ್ಮರ್ ಕಂಬವಿದ್ದು ಭಾರಿ ಅನಾಹುತ ತಪ್ಪಿದೆ. ಕೆಲವು ಕಡೆ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಮೂಡುಬಿದರೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಘಟನೆಯ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಜನ ಜಮಾಯಿಸಿದರು.3-5

3-3

 

 

3-2

3-4

By Suddi9

Leave a Reply

Your email address will not be published. Required fields are marked *