ಸುದ್ದಿ9ಕೈಕಂಬ :ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ಜಾತ್ರಾ ಮಹೋತ್ಸವ
ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ಚಂಡಿಕಾನಗರ ಶ್ರೀ ದೇವಿಯ ಜಾತ್ರಾ ಮಹೋತ್ಸವವು ತಾ.12-2-2014ನೇ ಬುಧವಾರ ಮೊದಲ್ಗೊಂಡು ತಾ.14-2-2014ನೇ ಶುಕ್ರವಾರ ತನಕ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ತಾ.12-2-2014ನೇ ಬುಧವಾರ ಪ್ರಾರ್ಥನೆ,ಮಹಾಪೂಜೆ,ಸಂಜೆ 6ರಿಂದ ಶ್ರೀ ರಾಮ ಯಕ್ಷಗಾನ ಮಂಡಳಿ ಚಂಡಿಕಾನಗರ ಬಿ.ಸಿ.ರೋಡ್ ಇವರಿಂದ ಯಕ್ಷಗಾನ ತಾಳಮದ್ದಳೆ,13-2-2014ನೇ ಗುರುವಾರ ಗಣಹೋಮ,ಬಿಂಬ ಕಲಶ ಪೂಜೆ ಬಿಂಬ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ದೀಪಾಲಂಕಾರ ಪೂಜೆ, ವಾದ್ಯಪೂಜೆ,ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ವಿಶೇಷ ನರ್ತನ ಬಲಿ, ಸಂಜೆ 5ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ, 14-2-2014ನೇ ಶುಕ್ರವಾರ ಗಣಹೋಮ, ದರ್ಶನ ಬಲಿ ಉತ್ಸವ ಆರಂಭ ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ, ನವಕಲಶಾಭಿಷೇಕ, ಮಹಾಪೂಜೆ ಮಂತ್ರಾಕ್ಷತೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ,ವಿಶೇಷ ರಂಗಪೂಜೆ,ಸಂಜೆ 5ರಿಂದ ಶ್ರೀ ರಾಮಕೃಷ್ಣ ಕಾಲೇಜು ಮಂಗಳೂರು ವಿದ್ಯಾಥರ್ಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.

By suddi9

Leave a Reply

Your email address will not be published. Required fields are marked *