ಯಕ್ಷಗಾನ ಕಲಾ ಸಂಘ(ರಿ)ಬೆಳ್ಳೂರು-ಬಾಳಿಕೆ ಇದರ ರಜತ ಮಹೋತ್ಸವ ಸಮಾರಂಭವು ಫೆ.2 ಭಾನುವಾರ ನಡೆಯಲಿದೆ. ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಲೆ ತೆಲಿಪಾಲೆ ಖ್ಯಾತಿಯ ಫ್ರೆಂಡ್ಸ್ ಮಂಗಳೂರು ಇವರಿಂದ ‘ತೆಲಿಕೆ ಬಾಯಿನಿಲಿಕೆ ‘ಹಾಸ್ಯ ರಸದೌತಣ ಹಾಗೂ ಮುಖವಾಡ ಮಾಂತ್ರಿಕ, ಕೋಳಿ ನೃತ್ಯಖ್ಯಾತಿಯ ಅಶೊಕ್ ಪೊಳಲಿ ಇವರಿಂದ ವಿವಿಧ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ಮಾಡಲಿದ್ದಾರೆ. ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ರಘು ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಆಳ್ವಾಸ್ ಎಜುಕೇಶನ್ ಟ್ರಸ್ಟ್ ಡಾ.ಮೋಹನ್ ಆಳ್ವ, ಬಿ.ಸಿ ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಪ್ರೊ. ತುಕಾರಾಮ ಪೂಜಾರಿ, ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್, ಪ್ರಗತಿಪರ ಕೃಷಿಕ ಉಳಿಪಾಡಿ ಗುತ್ತು ರಾಜೇಶ್ ನಾಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಂಗಳ ಆಟರ್್ ಪ್ರೀಂಟರ್ಸ್ ಬೆಂಗಳೂರು ಸುಂದರ ಸಾಲಿಯಾನ್, ಕಟೀಲು ಮೇಳ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ, ರಾಯಿ ,ಕೊಯಿಲ, ಅರಳ ಹಿಂದೂ ಧಮರ್ೊತ್ಥಾನ ವೇದಿಕೆ ಅಧ್ಯಕ್ಷ ದುಗರ್ಾಪ್ರಸಾದ್ ಶೆಟ್ಟಿ ಮವಂತೂರು. ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲವಿದರು ಜಯರಾಮ ಶೆಟ್ಟಿ ಮುಡ್ಕೂರು, ರಾಷ್ಟ್ರ್ರೀಯ ಮಟ್ಟದ ಕ್ರೀಡಾಪಟು ಕು.ಶಿಲ್ಪಾ, ರಾಜ್ಯಮಟ್ಟದ ಕ್ರೀಡಾಪಟು ಧೀರಜ್ ಇವರನ್ನು ಸಮ್ಮಾನಿಸಲಾಗುವುದು.
ರಜತ ಮಹೋತ್ಸವ ಆಚರಣಾ ಸಮಿತಿ ಸದಸ್ಯರು
ಗೌರವಾಧ್ಯಕ್ಷರು ; ಕೆ.ಪ್ರಸನ್ನ ಕುಮಾರ್ ಶೆಟ್ಟಿ ಬೆಂಗಳೂರು, ಉಮಾನಾಥ ರೈ ನಡ್ಯೋಡಿಗುತ್ತು, ಜಗದೀಶ ಆಳ್ವ ಆಗ್ಗೋಂಡೆ-ಅರಳ
ಅಧ್ಯಕ್ಷರು ; ಕೃಷ್ಣಪ್ಪ ಪೂಜಾರಿ ನಾಸಿಕ್ ಮುಂಬೈ, ಪ್ರಧಾನ ಕಾರ್ಯದಶರ್ಿ ದೇವಪ್ಪ ಪೂಜಾರಿ, ಉಪಾಧ್ಯಕ್ಷರುಗಳು ವೇದಾನಂದ ಕಾರಂತ ಕೂರಿಯಾಳ, ಪ್ರಕಾಶ್ ಆಳ್ವ ಗುಂಡಾಲ, ನಂದಪ್ಪರೈ ಬೆಳ್ಳೂರುಪರಾರಿ, ಕೋಶಾಧಿಕಾರಿ ಕವಿತಾ ಎಸ್ ಶೆಟ್ಟಿ ಏಚೀಲ್, ಜೊತೆ ಕಾರ್ಯದಶರ್ಿ ಜಗದೀಶ್ ಗುಡ್ಡೆಅಂಗಡಿ, ಜೊತೆ ಕಾರ್ಯದಶರ್ಿ ಹರೀಶ್ ಕಂಡದಬೆಟ್ಟು,
ಯಕ್ಷ ಕಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಗೌರವಾಧ್ಯಕ್ಷರು ಕೆ.ಪ್ರಸನ್ನ ಕುಮಾರ್ ಶೆಟ್ಟಿ, ಅಧ್ಯಕ್ಷರು ಚಂದ್ರಶೇಖರ್ ರಾವ್, ಪ್ರಧಾನ ಕಾರ್ಯದಶರ್ಿ ದೇವಪ್ಪ ಪೂಜಾರಿ, ಜೊತೆ ಕಾರ್ಯದಶರ್ಿ ಮೋಹನದಾಸ, ಕೋಶಾಧಿಕಾರಿ ಕವಿತಾ ಎಸ್ ಶೆಟ್ಟಿ ಏಚೀಲ್, ಸಂಘಟನಾ ಕಾರ್ಯದಶರ್ಿ ಯೋಗಿಶ ನೆಲ್ಲಿಮಾರು ಹಾಗೂ ಸರ್ವಸದಸ್ಯರು ಯಕ್ಷಗಾನ ಕಲಾ ಸಂಘ [ರಿ] ಬೆಳ್ಳೂರು ಬಾಳಿಕೆ
ಅದೇದಿನ ರಾತ್ರಿ ಕಟೀಲ್ ಶ್ರೀ ದುಗರ್ಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಎಂದು ಯಕ್ಷ ಕಲಾ ಸಂಘದ ಪ್ರಧಾನ ಕಾರ್ಯದಶರ್ಿ ದೇವಪ್ಪ ಪೂಜಾರಿ ಪತ್ರಿಕಾ ಪ್ರಕಟನೆ ತಿಳಿಸಿದೆ

