ಫರಂಗಿಪೇಟೆ : ಸುಜೀರು ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನದ ಶ್ರೀ ಧರ್ಮ ದೈವಗಳ ನೂತನ ಶಿಲಾಮಯ ಭಂಡಾರದ ಮನೆಯಲ್ಲಿ ನಡೆಯುವ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ದ ಪ್ರಯುಕ್ತ ಹೊರೆಕಾಣಿಕೆ ಶೋಭಾಯಾತ್ರೆಯು ಫರಂಗಿಪೇಟೆ ವಿಜಯನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ಫರಂಗಿಪೇಟೆ ರಾಜ ಮಾರ್ಗ ದಿಂದ ಕಡೆಗೋಳಿ ವರೆಗೆ ಅಲ್ಲಿಂದ ಸುಜೀರು ಶ್ರೀ ಧರ್ಮ ದೈವಗಳ ಭಂಡಾರ ದ ಮನೆ ವರೆಗೆ ವಿಜೃಂಭಣೆಯಿಂದ ನಡೆಯಿತು .
ಹೊರೆಕಾಣಿಕೆ ಶೋಭಾಯಾತ್ರೆಯ ಉದ್ಘಾಟನೆಯನ್ನು ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ ಕೊಟ್ಟರು ಇವರೊಂದಿಗೆ ಹೊರೆಕಾಣಿಕೆ ಯ ಉಸ್ತುವಾರಿ ವಹಿಸಿ ಕೊಂಡಿರುವ ಬರ್ಕೆ ಉಮೇಶ್ ಶೆಟ್ಟಿ , ಸುಂದರಶೆಟ್ಟಿ ಕಲ್ಲ ತಡಮೆ , ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ದ ಪ್ರದಾನ ಕಾರ್ಯದರ್ಶಿ ಪ್ರಕಾಶ್ ಚಂದ್ರ ರೈ ದೇವಸ್ಯ , ಕೊಡಮಣ್ಣು ಕಾಂತಪ್ಪ ಶೆಟ್ಟಿ , ಅರುಣ್ ಶೆಟ್ಟಿ ನುಲಿಯಾಳು ಗುತ್ತು , ಚಂದ್ರ ಶೇಖರ ಗಾಂಭೀರ ಸುಜೀರು ಗುತ್ತು ಚಂದ್ರಹಾಸ ಶೆಟ್ಟಿ ರಂಗೋಲಿ , ಸಂತೋಷ್ ಗಾಂಭೀರ , ವಿಠ್ಠಲ್ ಆಳ್ವ , ತಾರಾನಾಥ್ ಕೊಟ್ಟಾರಿ , ಸುಕೇಶ್ ಶೆಟ್ಟಿ ತೇವು , ಪ್ರಕಾಶ್ ಕಿದೆ ಬೆಟ್ಟು , ಮತ್ತಿತರರು ಉಪಸ್ಥಿತರಿದ್ದರು .
