ಬಂಟ್ವಾಳ: ಜನಸೇವೆಯೇ ಜನಾರ್ದನ ಸೇವೆ ಎಂಬ ಮಾತನ್ನು ಕೇವಲ ಪುಸ್ತಕಕ್ಕೆ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತಂದು ಅಕ್ಷರಶಃ ಪಾಲಿಸುತ್ತಿರುವ ಸೇವಾಂಜಲಿಯ ಕೆಲಸಗಳು ಅನುಕರಣೀಯ, ಇದೇ ರೀತಿ ಎಲ್ಲಾ ಸಂಘ ಸಂಸ್ಥೆಗಳು ಈ ಸಿದ್ದಾಂತವನ್ನು ಪಾಲಿಸಿದರೆ ಸಮಾಜದ ಒಳಿತಿಗೆ ಬಹಳ ಸಹಕಾರಿ ಎಂದು ತುಂಬೆ ಬಿ.ಎ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಹೇಳಿದರು.BTW_JUNE20_2

ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮ ಯೋಜನೆಯ ಸದಸ್ಯೆ ತುಂಬೆ ದರ್ಖಾಸಿನ ವಿಮಲ ಅವರು ಮೃತಪಟ್ಟ ಹಿನ್ನಲೆಯಲ್ಲಿ ಪರಿಹಾರ ಮೊತ್ತ 31 ಸಾವಿರವನ್ನು ಅವರ ಸಹೋದರಿ ಮೋಹಿನಿಯವರಿಗೆ ಸೇವಾಂಜಲಿಯಲ್ಲಿ ನಡೆಸ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು. ವೇದಿಕೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಸೇವಾಂಜಲಿಯ ಪ್ರಕಾಶ್ ಕಿದೆಬೆಟ್ಟು, ಮೋನಪ್ಪ ಅಮೀನ್, ಉಮಾಚಂದ್ರಶೇಖರ್, ದಂತ ವೈದ್ಯೆ ಡಾ. ರೀಮಾ, ಪಂಚಾಯಿತಿ ಸದಸ್ಯ ಎಂ.ಕೆ.ಖಾದರ್, ಸುಕುಮಾರ್, ಪದ್ಮನಾಭ ಕಿದೆಬೆಟ್ಟುನಾರಾಯಣ ಬೆಳ್ಚಡ, ಡಾ. ರಂಜಿತ್ ಶೆಟ್ಟಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *