ಕಲ್ಲಡ್ಕ: 2016-17 ಶೈಕ್ಷಣಿಕ ವರ್ಷದಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಓ.ಒ.ಒ.S) ಯಲ್ಲಿ ಶ್ರೀರಾಮ ಪ್ರೌಢಶಾಲೆಯ ಜಯರಾಂ ಪ್ರಭು ಹಾಗೂ ರಾಜೀವಿ ದಂಪತಿಗಳ ಪುತ್ರನಾದ ಪ್ರದೀಪ್, ಕೇಶವ ಗೌಡ ಹಾಗೂ ಭಾರತಿ ದಂಪತಿಗಳ ಪುತ್ರನಾದ ಅಭಿಷೇಕ್, ಉಮೇಶ್ ಆಚಾರಿ ಹಾಗೂ ಆಶಾ ದಂಪತಿಗಳ ಪುತ್ರನಾದ ಸೃಜನ್ ಯು, ರಂಗಣ್ಣ ವೈ ಹಾಗೂ ವನಿತಾ ದಂಪತಿಗಳ ಪುತ್ರಿಯಾದ ವಸುಧಾ, ನಾರಾಯಣ ನಾಯ್ಕ ಹಾಗೂ ವನಿತಾ ದಂಪತಿಗಳ ಪುತ್ರಿಯಾದ ಚೈತ್ರ ಪಿ, ಕೆರಿಯ ಹಾಗೂ ಭಾರತಿ ದಂಪತಿಗಳ ಪುತ್ರಿಯಾದ ಪ್ರತಿಭಾ ಒಟ್ಟು 6 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿ ವಿದ್ಯಾರ್ಥಿವೇತನಕ್ಕೆ ಆಯ್ಕೆಗೊಂಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಅಧ್ಯಾಪಕ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ- (ಓ.ಒ.ಒ.S)
