ಕಲ್ಲಡ್ಕ :  ಪರಿಸರದ ಕೊಡುಗೆ ಮನುಷ್ಯನ ಬದುಕಿಗೆ ಅಪಾರವಾಗಿದೆ. ಆದರೆ ಇಂದು ತಾಂತ್ರಿಕ ಕಾರಣದಿಂದ ಮಾನವನಿಗೆ ಹಣದ ದುರಾಸೆ ಹೆಚ್ಚಾಗಿದೆ. ಇದರ ಪರಿಣಾಮ ಪರಿಸರದ ಮೇಲೆ ಬಿದ್ದು ಪರಿಸರ ಸಮತೋಲನ ತಪ್ಪುತ್ತದೆ. ಮನುಷ್ಯನ ಆರೋಗ್ಯದ ಮೆಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಪರಿಸರ ಸಂರಕ್ಷಣೆ ಅತೀ ಅವಶ್ಯಕ. ಪರಿಸರ ಸಂರಕ್ಷಣೆ ಕೇವಲ ಪರಿಸರ ದಿನಕ್ಕೆ ಸೀಮಿತವಾಗದೇ ದಿನಂಪ್ರತಿ ಪರಿಸರ ಉಳಿಸುವ ಕಾರ್ಯವಾಗಬೇಕು ಎಂದು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಪರಿಸರ ದಿನ ಕಾರ್ಯಕ್ರಮವನ್ನುದ್ದೇಶಿಸಿ  ಗಾಯತ್ರಿ ಸಹಶಿಕ್ಷಕಿ ಮಾತನಾಡಿದರು.parisara1

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ರಾಮಪ್ರಸಾದ್ ಉಪಸ್ಥಿತರಿದ್ದು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳ ವಿತರಣೆಯೂ ನೆರವೇರಿತು.  ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು  ರಮೇಶ್ ಎನ್ ಹಾಗೂ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು   ಕಾರ್ಯಕ್ರಮವನ್ನು  ಜಿನ್ನಪ್ಪ ಶ್ರೀಮಾನ್ ನಿರೂಪಿಸಿ, ಗೋಪಾಲ್ ಶ್ರೀಮಾನ್ ಸ್ವಾಗತಿಸಿದರು,

By suddi9

Leave a Reply

Your email address will not be published. Required fields are marked *