ಮುಂಬಯಿ: ರಾಯಗಾಢ, ಜ.26: ಸುಮಾರು ಆರು ತಿಂಗಳ ಹಿಂದೆ ಇಲ್ಲಿಗೆ ನಾನು ಖುದ್ಧಾಗಿ ಭೇಟಿ ನೀಡಿದಾಗ ಶಾಲೆಯ ದುರಾವಸ್ಥೆ ಕಂಡ ನನಗೆ ಮಕ್ಕಳ ಭವಿಷ್ಯದ ಬಗ್ಗೆ ಅತೀವ ಚಿಂತೆ ಕಾಡತೊಡಗಿತು. ಬಹುಶಃ ಮಂದಿರ ಕಟ್ಟುವ ಬದಲಾಗಿ ವಿದ್ಯಾದೇಗುಲ ಕಟ್ಟಿದರೆ ಸಾವಿರಾರು ಮಕ್ಕಳ ಬಾಳು ಪ್ರಕಾಶಮಾನವಾಗಿ ಭಗವಂತನಿಗೆ ಮೆಚ್ಚುವ ಕೆಲಸವಾಗಲ್ಲದು ಎಂದು ಅರಿತು ಭವಾನಿ ಫೌಂಡೇಶನ್‍ನ ಸಮಿತಿಯ ವಿಶ್ವಾಸ ಪಡೆದು ದೇಣಿಗೆ ನೀಡುವ ಮನಸ್ಸು ಮಾಡಿದೆ. ಮಕ್ಕಳ ಮನೋವಿಕಾಸ ಗೊಳಿಸಬಲ್ಲ ಶಾಲೆಗಳ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸುವ ಅವಕಾಶ ನಮ್ಮ ಪಾಲಿಗೆ ಒದಗಿದ್ದು ನಮ್ಮ ಭಾಗ್ಯವೆಣಿಸಿದ್ದೇನೆ. ಇದು ನನ್ನ ಜನನಿದಾತೆ ಭವಾನಿ ಅಮ್ಮನ ಮುಖೇನ ನೆರವೇರಿದ ಸರಸ್ವತಿ ಸೇವೆ ಅನಿಸಿದ್ದೇನೆ. ವಾವರ್ಲಿ ವಿಕಾಸ ಕಾಣದ ಕುಗ್ರಾಮವಾಗಿರ ಬಹುದು ಆದರೆ ಇಲ್ಲಿನ ಜನತೆ, ಶಿಕ್ಷಕರ ವಿಧೇಯತೆ ಪ್ರೀತಿವಾತ್ಸಲ್ಯ ಮತ್ತೆಲ್ಲೂ ಕಾಣಸಿಗದು. ಆದರುದರಿಂದಲೇ ಕುಗ್ರಾಮದ ವಿಧೇಯಕ ಶಿಕ್ಷಕರು ಹೃದಯವಂತರು. ಇಂತಹ ಶಿಕ್ಷಕರ ಮಮತೆಯ ಮಕ್ಕಳನ್ನು ಓದಿಸುವ ಮನಸ್ಸು ದಾನಶೀಲರು, ಶಿಕ್ಷಣ ಪ್ರೇಮಿಗಳು ಮಾಡುವ ಅಗತ್ಯವಿದೆ. ಕರುಣಾಮಯಿ ಜನತೆಯಿಂದಲೇ ಭಾರತಾಂಭೆಯ ಸೇವೆ ಸಾಧ್ಯ. ಭಾರತೀಯರ ಸಂಬಂಧಗಳು ವಿಶ್ವಸಾರ್ಹವಾದವು ಎನ್ನುವುದಕ್ಕೆ ಈ ಕಾರ್ಯಕ್ರ ಮೇ ಸಾಕ್ಷಿ ಎಂದು ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ (ಕೆ.ಡಿಶೆಟ್ಟಿ) ನುಡಿದರು.

Bhavani Foundation Raighad School-1
Bhavani Foundation Raighad School-15
Bhavani Foundation Raighad School-A4

Bhavani Foundation Raighad School-A5

ಭವಾನಿ ಫೌಂಡೇಶನ್ ನವಿಮುಂಬಯಿ ಸಂಸ್ಥೆಯಿಂದ ನವೀಕರಿಸಲ್ಪಟ್ಟ ಮಹಾರಾಷ್ಟ್ರ ರಾಜ್ಯದ ಠಾಕೂರ್‍ವಾಡಿ ಅಲ್ಲಿನ ರಾಯಗಾಢ ಜಿಲ್ಲಾ ಪರಿಷದ್ ಪ್ರಾಥಮಿಕ ಶಾಲಾ(ರಾಜಿಪ) ಹಾಗೂ ಅಂಗನವಾಡಿ ಕಟ್ಟಡ ಮತ್ತು ಪಾಕಶಾಲೆ ಉದ್ಘಾಟಿಸಿ ಸರಸ್ವತಿ ಮಾತೆಗೆ ಆರತಿ ನೆರವೇರಿಸಿ ಸಭಿಕರನ್ನುದ್ದೇಶಿಸಿ ಕೆ.ಡಿ ಶೆಟ್ಟಿ ಮಾತನಾಡಿದರು.Bhavani Foundation Raighad School-A2

Bhavani Foundation Raighad School-A6

ಭಾರತ ರಾಷ್ಟ್ರದ 68ನೇ ಗಣರಾಜ್ಯೋತ್ಸವ ಶುಭಾವಸರದಲ್ಲಿ ಇಂದಿಲ್ಲಿ ಗುರುವಾರ ಸಂಜೆ ರಾಜಿಪ ಶಾಲೆ ಭಿಲವಲೆ ಇದರ ಅವರಣದಲ್ಲಿ ಉಭಯ ಶಾಲಾ ಸೌಲತ್ತುಗಳ ಸೇವಾರಂಭ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ.ಡಿ ಶೆಟ್ಟಿ ಅವರು ಮಾತಾಪಿತರು ದೇವರೇ ಸರಿ. ಅದರಲ್ಲೂ ತಾಯಿ ಮತ್ತು ಮಕ್ಕಳು ದೇವರ ರೂಪವಾಗಿದ್ದಾರೆ. ಗುರುಗಳು ವಿದ್ಯಾರ್ಜನಾ ದೇವರು. ಮಾತಾಪಿತರು ಮತ್ತು ಗುರುಗಳನ್ನು ಗೌರವಿಸುವವರು ಜೀವನದಲ್ಲಿ ನೆಮ್ಮದಿ, ಸುಖಿ ಆಗಿರುತ್ತಾರೆ. ಏನೋ ಐದಾರು ನಿಮಿಷಗಳ ಮಾತುಕತೆಯಲ್ಲಿ ನಾನು ಈ ಶಾಲೆಗಳ ಪಾಡನ್ನು ಮನವರಿಸಿ ದೇಣಿಗೆಯ ಭರವಸೆಯನ್ನೀಡಿದ್ದೆ. ಇದನ್ನು ಪಡೆಯುವಲ್ಲಿ ಸಫಲರಾದ ಪಾಲ್ವೆಸರ್ ತನ್ನ ವಿಶ್ವಾಸಭರಿತ ಸೇವೆಯನ್ನು ತ್ವರಿತವಾಗಿ ಪೂರೈಸಿ ಪ್ರಾಮಾಣಿಕತೆಗೆ ಪಾತ್ರರಾಗಿದ್ದ ಕಾರಣ ಈ ವೇದಿಕೆ ಸಜ್ಜಾಗಿರುವುದು ಅಭಿನಂದನೀಯ ಎಂದರು.

  1. Bhavani Foundation Raighad School-16

ಗ್ರುಪ್‍ಗ್ರಾಮ್ ಪಂಚಾಯತ್ ವಾವರ್ಲಿ ಇಲ್ಲಿನ ಭಿಲವಲೆಯ ರಾಜಿಪ ಶಾಲೆಗೆ ನಿರ್ಮಿಸಿದ ಸುಸಚ್ಚಿತ ಶೌಚಾಲಯವನ್ನು ನೆರೂಲ್ ಶ್ರೀ ಮಣಿಕಾಂದ ಸೇವಾ ಸಂಘಂ ಇದರ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಎನ್.ಶೆಟ್ಟಿ (ಅಶ್ವಿತ್ ರೆಸಿಡೆನ್ಸಿ) ಉದ್ಘಾಟಿಸಿದರು. ಖಾಲಪುರ ಪಂಚಾಯತ್ ಸಮಿತಿ ಶಿಕ್ಷಣ ವಿಸ್ತಾರ ಅಧಿಕಾರಿ ಸ್ಮೀತಾ ಖೈರ್ನಾರ್, ಗ್ರಾಮಪಂಚಾಯತ್ ಸದಸ್ಯೆ ಅಮಿತಾ ಲಬಾಂಡೆ, ಸರ್‍ಪಂಚ್ ಜೀಜಾಭಾೈ ಗೋರೆ ಉಪಸ್ಥಿತರಿದ್ದು ಕುಗ್ರಾಮದ ಜನತೆಯ ಶಿಕ್ಷಣ ವಂಚಿತ ಮಕ್ಕಳ ವಿದ್ಯಾರ್ಜನೆಯನ್ನು ಮನವರಿಸಿ ಉದಾರತೆಯಲ್ಲಿ ಸೌಲಭ್ಯಗಳನ್ನು ಒದಗಿಸಿದ ಕೆ.ಡಿಶೆಟ್ಟಿ ಅವರನ್ನು ಗ್ರಾಮದ ಜನತೆಯ ಪರವಾಗಿ ಸನ್ಮಾನಿಸಿ ಅಭಿವಂದಿಸಿದರು.

Bhavani Foundation Raighad School-B1

ಶಾಲೆಗಳ ವಾತಾವರಣ ವ್ಯವಸ್ಥಿತವಾಗಿದ್ದಾಗ ಮಾತ್ರ ಮಕ್ಕಳು ಪರಿಪೂರ್ಣತೆಯ ವಿದ್ಯಾಭ್ಯಾಸ ಪಡೆಯಲು ಸಾಧ್ಯ. ಶಾಸನಗಳನ್ನೇ ನಂಬಿದರೆ ಗ್ರಾಮೀಣ ಪ್ರದೇಶಗಳ ವಿದ್ಯಾಲಯಗಳ ಮಟ್ಟದಲ್ಲಿ ಸುಧಾರಣೆ ಅಸಾಧ್ಯ. ಸ್ಥಾನೀಯ ಮತ್ತು ಕೊಡುಗೈ ದಾನಿಗಳ ಸಹಾಯಹಸ್ತ ಲಭಿಸಿದಾಗ ಮಕ್ಕಳ ವಿಕಾಸ ಕಾರ್ಯಗಳು ಹಸನಾಗುವುದು. ಭವಾನಿ ಫೌಂಡೇಶನ್‍ನಂತಹ ಶಿಕ್ಷಣಪ್ರಿಯರು ಪ್ರೇರೆಪಿಸಿದರೆ ರಾಷ್ಟ್ರದ ಶಿಕ್ಷಣವ್ಯವಸ್ಥೆಯ ಐದನೇ ಸ್ಥಾನದಲ್ಲಿರುವ ಮಹಾರಾಷ್ಟ್ರವು ಮೊದಲ ಸ್ಥಾನಕ್ಕೇರಲು ಸಾಧ್ಯ. ಆ ಮೂಲಕ ರಾಷ್ಟ್ರದ ಭವಿಷ್ಯತ್ತಿನ ಪ್ರಜೆಗಳಾದ ವಿದ್ಯಾಥಿರ್sಗಳನ್ನು ಸುಶಿಕ್ಷಿತರನ್ನಾಗಿಸುವಲ್ಲಿ ನಾವೆಲ್ಲರೂ ಪಡುವ ಶ್ರಮ ಫಲದಾಯಕ ಆಗಬಲ್ಲದು ಎಂದು ಸ್ಮೀತಾ ಖೈರ್ನಾರ್ ಅಭಿಪ್ರಾಯ ಪಟ್ಟರು.

Bhavani Foundation Raighad School-B8

Bhavani Foundation Raighad School-30

ವೇದಿಕೆಯಲ್ಲಿ ಸಂಜೀವ ಎನ್.ಶೆಟ್ಟಿ, ಭವಾನಿ ಫೌಂಡೇಶನ್‍ನ ಉಪಾಧ್ಯಕ್ಷ ಜೀಕ್ಷಿತ್ ಕುಸುಮೋದರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪಂಡಿತ್ ನವೀನ್‍ಚಂ ದ್ರ ಆರ್.ಸನೀಲ್, ನವೀನ್ ಎಸ್.ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ.ಶೆಟ್ಟಿ, ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು, ಕರ್ನೂರು ಮೋಹನ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Bhavani Foundation Raighad School-B12

Bhavani Foundation Raighad School-6

ಅನಂತ್ ತಾಂಬ್ರೆ (ಪೊಲಿಸ್ ಪಾಟೀಲ್) ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿನಿಯರು ಗಣೇಶಸ್ತುತಿ ಹಾಗೂ ಸ್ವಾಗತಗೀತೆ ಹಾಡಿದರು. ಸ್ಥಾನೀಯ ಸಂಪನ್ಮೂಲ ವ್ಯಕ್ತಿ ಮುರಳೀಧರ್ ಪಾಲ್ವೆ ಪ್ರಾಸ್ತವಿಕ ನುಡಿಗಳನ್ನಾಡಿದರು. ಶಿಕ್ಷಕ ತಸ್ಶೊಡೆ ಪರ್ಸುರಾಮ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ಥಾನೀಯ ಮುಂದಾಳು ಗಳಾದ ಅಕೂರ್ ಗುರುಜೀ, ಅನಂತ ಪಾಟೀಲ್, ಜಾನು ಮುಕುನೆ, ಎಸ್.ಕೆ ಪಾಲ್ವೆ, ಸಂಜಯ್ ವಾಗ್ಮಾರೆ, ಶಾರದಾದಾಬ್ನೆ ಮತ್ತಿತರು ಅತಿಥಿಗಳಿಗೆ ಪುಷ್ಪ, ಶ್ರೀಫಲವನ್ನಿತ್ತು ಶಾಲು ಹೊದಿಸಿ ಗೌರವಿಸಿದರು. ಶಿಕ್ಷಕಿ ಹೇಮಂತ್ ವಿಶಾವಳೆ ವಿದ್ಯಾರ್ಥಿ ಗುಣದರ್ಶನಗೈದರು. ಸುಂದರ್ ಚವ್ಹಾಣ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಶಿಕ್ಷಕಿ ದೀಪಾ ಎನ್.ದೇಶಪಾಂಡೆ ಅಭಾರ ಮನ್ನಿಸಿದರು. ಶಾಲಾ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯಾವಳಿಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

By suddi9

Leave a Reply

Your email address will not be published. Required fields are marked *