ಮುಂಬಯಿ: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಕ್ಷೌರಿಕ ವೃತ್ತಿ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಜಾಗತಿಕ ಮನ್ನಣೆ ಪಡೆದ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಆಡಳಿತ್ವದ ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಸುಸಜ್ಜಿತ, ಅತ್ಯಾಧುನಿಕ ಪ್ರಸಿದ್ಧ ಕೇಶ ವಿನ್ಯಾಸ ಮಳಿಗೆಯನ್ನು ಕಳೆದ ಶುಕ್ರವಾರ ಬಾಂದ್ರಾ ಪೂರ್ವದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‍ನಲ್ಲಿರುವ ದಿ ಕ್ಯಾಪ್ಟಲ್ ಕಟ್ಟಡದಲ್ಲಿ ಸೇವಾರ್ಪಣೆ ಗೊಳಿಸಿದ್ದು, ಲೊರೆಲ್ ಪ್ರೊಫೆಶನಲ್ ಪ್ರೊಡಕ್ಟ್‍ನ ವಿಭಾಗ ಇಂಡಿಯಾ ನಿರ್ದೇಶಕ ಅಸಿಮ್ ಕೌಶಿಕ್ ಮತ್ತು ಪ್ರಧಾನ ವ್ಯವಸ್ಥಾಪಕ ಅಬೇ ಜಾರ್ಜ್ ಫಿಲಿಫ್ ರಿಬ್ಬನ್ ಬಿಡಿಸಿ ಶಿವಾ’ಸ್ 13ನೇ ಮಳಿಗೆಯನ್ನು ಉದ್ಘಾಟಿಸಿದರು.
ಈ ಶುಭಾವಸರದಲ್ಲಿ ಅತಿಥಿsಗಳಾಗಿ ಶಿವಸೇನಾ ಮುಂದಾಳು ಶ್ರೀಧರ್ ಪಾಟ್ಕರ್, ಸಿಎ| ಸಾವ್‍ಮಿಲ್ ಶಪರಿಯಾ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಾಜಿ ಗೌ| ಪ್ರ| ಕಾರ್ಯದರ್ಶಿ ನ್ಯಾಯವಾದಿ ಆರ್.ಎಂ ಭಂಡಾರಿ, ಪ್ರಭಾಕರ್ ಭಂಡಾರಿ ಥಾಣೆ ಅವರನ್ನೊಳಗೊಂಡು ನೂರಾರು ಗಣ್ಯರು ಆಗಮಿಸಿ ಶಿವಾ’ಸ್‍ಗೆ ಅಭಿನಂದಿಸಿದರು.



ಈ ಸಂದರ್ಭ ಗುಲಾಬಿ ಕೃಷ್ಣ ಭಂಡಾರಿ, ಅನುಶ್ರೀ ಶಿವರಾಮ ಭಂಡಾರಿ, ಮಾ| ರೋಹಿಲ್ ಶಿವರಾಮ್, ಬೇಬಿ ಆರಾಧ್ಯ ಶಿವರಾಮ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶಿವಾ’ಸ್‍ಗೆ ಶುಭಾರೈಸಿದರು. ಶಿವಾ’ಸ್ ಸಂಸ್ಥೆಯ ಕಾರ್ಯನಿರ್ವಹಣಾ ಮುಖ್ಯಸ್ಥೆ ಕು| ಪೂರ್ವಿ ಖಂಡೇಳ್ಕರ್ ಅತಿಥಿಗಳನ್ನು ಪರಿಚಯಿಸಿದರು.
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


