ಬಂಟ್ವಾಳ: ತಾಲ್ಲೂಕಿನ ಫರಂಗಿಪೇಟೆ ಸಮೀಪದ ಅರ್ಕುಳ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡ ಶಾಲಾ ವಾಹನಕ್ಕೆ ಉದ್ಯಮಿ ಎ.ಕೆ.ಮಂಜುನಾಥ ಶೆಣೈ ಚಾಲನೆ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ. ಜಯರಾಮ ಶೇಖ, ದಾಮೋದರ ಶೆಣೈ, ದಾಮೋದರ ಹೆಗ್ಡೆ, ಕೃಷ್ಣ ಕುಮಾರ್ ಪೂಂಜ, ಮಂಜುನಾಥ್ ಕಾಮತ್, ಸಂಚಾಲಕರಾದ ಎ. ಗೋವಿಂದ ಶೆಣೈ, ಮುಖ್ಯಶಿಕ್ಷಕ ದೇವದಾಸ್ ಕೆ.ಆರ್., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲಕ್ಷಣ್ ಕುಮಾರ್, ಹರೀಶ ಮತ್ತಿತರರು ಇದ್ದರು.

