ಬಂಟ್ವಾಳ: ಅಕ್ರಮವಾಗಿ ಮದ್ಯ ದಾಸ್ತಾನಿರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಜು.2ರಂದು ಚೆನ್ನೈತ್ತೋಡಿ ಗ್ರಾಮದ ಕಡ್ತಲಬೆಟ್ಟು ಎಂಬಲ್ಲಿ ಸಂಭವಿಸಿದ್ದು ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಸಿದ್ದಾರೆ.
ಇಲ್ಲಿನ ಶಿವಾಜಿ ಶೆಟ್ಟಿ(56) ಎಂಬಾತ ಆರೋಪಿಯಾಗಿದ್ದಾನೆ. ಅವನು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಠಾಣಾ ಎಸ್.ಐ.ಲತೇಶ್ ಕುಮಾರ್ ಮತ್ತು ಸಿಬಂದಿಗಳು ದಾಳಿ ನಡೆಸಿದ್ದರು. ಆರೋಪಿಯಿಂದ ಸುಮಾರು 4,800 ರೂ. ಮೊತ್ತದ 2 ಬಾಕ್ಸ್ನಷ್ಟು ಕ್ವಾರ್ಟರ್ ಬಾಟಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಸಲಾಗಿದೆ. ದಾಳಿ ಕಾರ್ಯಚರಣೆಯಲ್ಲಿ ಸಿಬಂದಿಗಳಾದ ವೆಂಕಪ್ಪ , ಅಬ್ದುಲ್ ಲತೀಫ್, ಲಾರೆನ್ಸ್ , ಹರೀಶ್ಚಂದ್ರ ಮತ್ತು ಚಾಲಕ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *