ಬಂಟ್ವಾಳ : ಬಂಟ್ವಾಳ ತಾಲೂಕು ಉಳಿ ಗ್ರಾಮ ಪುಣ್ಕೆದಡಿ ಶಾಲೆಯ ವಿದ್ಯಾರ್ಥಿಗಳಿಗೆ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಉಚಿತ ಲೇಖನ ಪುಸ್ತಕ, ಸಮವಸ್ತ್ರ , ಕೊಡೆ ವಿತರಣೆ ಪದೋನ್ನತಿ ಹೊಂದಿದ ಶಿಕ್ಷಕ ದುರ್ಗಾ ಪ್ರಸಾದ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಪುಣ್ಕೆದಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಜೂ.28ರಂದು ಜರಗಿತು.
ಮುಡ್ನೂರು, ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ , ದಾನಿ ಜಯಂತ ನಡುಬೈಲು ಅವರು ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಂಗಡಿ ದಂತವೈದ್ಯಡಾ|ರಾಜರಾಮ್ ಕೋಂಗುಜೆ ಅವರು ಅಭಿನಂದನಾ ಭಾಷಣ ಮಾಡಿ ಮಾತನಾಡಿ ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಶಿಕ್ಷಣ ಪ್ರೇಮಿಗಳ,ಊರ ಪರವೂರ ದಾನಿಗಳ ಸಹಕಾರದಿಂದ ಉನ್ನತಿಗೇರಿಸಿ ಗುಣಮಟ್ಟದ ಶಿಕ್ಷಣ ನೀಡಿ ಸ್ಪರ್ಧಾ ತ್ಮಕವಾಗಿ ಅಭಿವೃದ್ಧಿ ಪಡಿಸಲು ಸಹಕರಿಸಿದ ಊರವರು ಹಾಗೂ ಶಿಕ್ಷಕ ವೃಂದ ಅಭಿನಂದನೀಯರು. ನಮ್ಮೂರ ಶಾಲೆ ನಮ್ಮ ಶಾಲೆ ಎಂದು ಪರಿಗಣಿಸಿದಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಪುತ್ತೂರು ಠಾಣಾ ಆರಕ್ಷಕ ಶಿವಾನಂದ ಮೈರ, ದಾನಿ ಮಹಮ್ಮದ್ ರಫೀಕ್ ಹೆಗ್ಗಣಗುರಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರಭಾಕರ, ಶಾಲಾ ಪೋಷಣಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಭಂಡಾರಿ ಪುಣ್ಕೆದಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಗೌಡ, ಪ್ರಗತಿಪರ ಕೃಷಿಕ ವಿಠಲ್ ಭಂಡಾರಿ ಪುಣ್ಕೆದಡಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ತುಷಾರ್ ಆರ್.ಭಂಡಾರಿ ಪುಣ್ಕೆದಡಿ, ನರಿಮೊಗರು ಸೇ.ಸ.ಬ್ಯಾಂಕ್ ನಿರ್ಧೇಶಕ ಜಯರಾಮ ಪೂಜಾರಿ ನರಿಮೊಗರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 7 ವರ್ಷಗಳಿಂದ ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಪ್ರೌಢ ಶಾಲೆಗೆ ಪದೋನ್ನತಿ ಹೊಂದಿದ ದುರ್ಗಾಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು.
ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ರಂಜಿತ್ ಮೈರ ಅವರು ಸ್ವಾಗತಿಸಿದರು. ಪ್ರಶಾಂತ್ ಮೈರ ವಂದಿಸಿದರು. ಪುರಂದರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
