ಬಂಟ್ವಾಳ:ಶ್ರೀ ಶಾರದಾ ಕಲಾ ಕೇಂದ್ರದಲ್ಲಿ ದಿನಾಂಕ 01.07.2014 ಮಂಗಳವಾರದಂದು ಪ್ರತಿ ವರ್ಷದಂತೆ ಈ ವರ್ಷವು ಯಕ್ಷಗಾನ ತರಬೇತಿ ತರಗತಿಯನ್ನು ಯಕ್ಷ ಗುರುಗಳಾದ ಶ್ರೀ ಸತೀಶ್ ಮಡಿವಾಳ್ರವರು ದೀಪ ಪ್ರಜ್ವಲನ ಮಾಡಿ ಉದ್ಘಾಟಿಸಿದರು.

ಯಕ್ಷಗಾನ ಕಲೆಯು ಪ್ರತಿಭೆಗೆ ಪ್ರೋತ್ಸಾಹಕವಾಗಿದೆ. ಯಕ್ಷಗಾನಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಸರಕಾರ ವಿಶೇಷವಾದ ಕೊಡುಗೆಯ ಮೂಲಕ ಸಹಕಾರ ನೀಡುತ್ತಿದೆ. ಹಾಗೆ ನಮ್ಮ ಜಿಲ್ಲೆಗೂ (ದ.ಕ) ಸಹಕಾರ ನೀಡಿದರೆ ಹೆಚ್ಚಿನ ಪ್ರತಿಭೆಗಳು ಅರಳಲು ಮತ್ತು ಕಲೆಯು ಮುನ್ನಡೆಯಲು ಸಾದ್ಯ. ಈ ಕಲೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮ ಪಡಿಸಲು ಮತ್ತು ಪ್ರತಿಭೆಯನ್ನು ಪ್ರಕಟಿಸಲು ವೇಧಿಕೆಯು ಸಿಕ್ಕಿದಂತಾಗುತ್ತದೆ ಎಂದರು. ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಭಾರತಿಯವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ಇದೆ.ಅವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಲಿ ಮತ್ತು ಯಕ್ಷ ಕಲೆಯು ಎಲ್ಲರಿಗೂ ಪ್ರೇರಣೆ ನೀಡುವಂತಾಗಲಿ ಎಂದು ಯಕ್ಷಕಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀಶಾರದಾ ಯಕ್ಷ ಕಲಾ ಕೇಂದ್ರದ ನಿರ್ದೇಶಕರು ಶ್ರೀ ಶಿವಪ್ಪ ನಾಯ್ಕ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಯಶೋಮತಿ ವಂದಿಸಿದರು.ಯಕ್ಷಪ್ರಿಯ ಶ್ರೀ ಪರಮೇಶ್ವರ ಜಿ.ಹೆಗಡೆ ಕಾರ್ಯಕ್ರಮ ನಿರೂಪಿಸಿದರ.
