ಬಜಪೆ: ಪೋಲೆಂಡ್ ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ದೆಯಲ್ಲಿ ಮಿಸ್ ಸುಪ್ರ ನ್ಯಾಶನಲ್-2016 ಬಾರತದ ಪ್ರತಿನಿಧಿಯಾಗಿ ಬಾಗವಹಿಸಿ ಮಿಸ್ ಸುಪ್ರ ನ್ಯಾಶನಲ್-2016 ವಿಜೇತೆ ಶ್ರೀನಿಧಿ ಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

s-5

s-6

s-3
shrinidi

ದೇವಸ್ಥಾನದ ವತಿಯಿಂದ ಅನಂತಪದ್ಮನಾಭ ಆಸ್ರಣ್ಣ ದುರ್ಗೆಯ ಶೇಷ ವಸ್ತ್ರ ನೀಡಿ ಗೌರವಿಸಿದರು. ನಂತರ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿ, ತನ್ನ ತವರು ಮನೆ ತಾಳಿಪಾಡಿ ಗುತ್ತುಗೆ ತೆರಳಿದರು, ಇಂದು ಸಂಜೆ ಕಿನ್ನಿಗೋಳಿ ರಾಜಾಂಗಣದಲ್ಲಿ ಸಾರ್ವಜನಿಕ ಸನ್ಮಾನ ನಡೆಯಲಿದೆ.

s-2

s-4

ಶ್ರೀನಿಧಿ ಜೊತೆ ಈ ಸಂದರ್ಭ ದೇವಳದ ಅನುವಂಶಿಕ ಆಡಳಿತ ಮುಕ್ತೇಸರ ಡಾ ರವೀಂದ್ರನಾಥ ಪೂಂಜ, ಪ್ರಧಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ, ತಾಳಿಪಾಡಿಗುತ್ತು ಧನಪಾಲ ಶೆಟ್ಟಿ, ದಿನೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ, ಸುಕುಮಾರ್ ಶೆಟ್ಟಿ, ಸತ್ಯೇಶ್ ಶೆಟ್ಟಿ, ಗಿರೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಸಾಯಿನಾಥ ಶೆಟ್ಟಿ, ಐಕಳ ಮಹಾಬಲ ಶೆಟ್ಟಿ, ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ದಿವಾಕರ ಕರ್ಕೇರ, ವಿನೋದ್‍ಕುಮಾರ್ ಬೊಳ್ಳೂರು, ಶಿವಾನಂದ ಶೆಟ್ಟಿ, ಮುರ ಸದಾಶಿವ ಶೆಟ್ಟಿ, ನೀಲಯ್ಯ ಕೋಟ್ಯಾನ್, ಪಿ. ಸತೀಶ್ ರಾವ್ ಮತ್ತಿತರರು ಇದ್ದರು.

ವರದಿ: ನಿಶಾಂತ್

By suddi9

Leave a Reply

Your email address will not be published. Required fields are marked *