ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘವು ಸಂಶೋಧನೆ ಮತ್ತು ಪ್ರಕಾಶಣದ ಮುಖೇನ ಲೇಖಕರು ಮತ್ತು ಓದುಗರಿಗೆ ಸಂಪರ್ಕ ಸೇತುವೆಯಾಗುವ ಉದ್ದೇಶದಿಂದ `ಗ್ರಂಥಾಯನ’ ಎಂಬ ವಿಭಾಗವನ್ನು 20 ಡಿಶೆಂಬರ್ 1998 ರಂದು ಉಉದ್ಘಾಟಿಸಲಾಯಿತು. ಗ್ರಂಥಾಯನದ ಲಾಭವನ್ನು ಎಲ್ಲಾ ಬರಹಗಾರರು ಪಡೆದುಕೊಳ್ಳಬೇಕು. ಅಕ್ಷರಾಭಿಮಾನಿ ಸದಸ್ಯರು ಪುಸ್ತಕವನ್ನು ಕೊಂಡು ಓದುವುದರ ಮೂಲಕ ಲೇಖಕರನ್ನು, ಪ್ರಕಾಶಕರನ್ನು ಪ್ರೋತ್ಸಾಹಿಸಬೇಕು ಎಂದು ಗ್ರಂಥಾಯನವನ್ನು ಉದ್ಘಾಟನಾ ಸಮಾರಂಬದಲ್ಲಿ ಅದರ ಪ್ರಥಮ ನಿರ್ದೇಶಕರಾದ ಎಸ್.ಕೆ. ಸುಂದರ್ ಅಂದು ನುಡಿದಿದ್ದರು.

goregav-4

ಅದೇ ದಿನ ರೂಪಾಯಿ 10,000/- ದೇಣಿಗೆ ನೀಡಿ ಗ್ರಂಥಾಯನದ ಮಹಾ ಪೋಷಕರಾಗಿ ಈ ಯೋಜನೆಗೆ ಬೆನ್ನು ತಟ್ಟಿದವರು ಆರ್.ಕೆ. ಪಾಲನ್, ಎಂ.ವಿ. ಕಿಣಿ, ಎ. ಜಯರಾಮ್ ಪ್ರಮುಖರು. ಈಗಾಗಲೇ ಗ್ರಂಥಾಯನವು ಬಹುಭಾಷಾ ಕಾವ್ಯ ಸಂಕಲನ ಕಾರ್ತಿಕ ಎಂಬ ಕೃತಿಯನ್ನು, ವಿಚಾರಭಾರತಿ ಎಂಬ ಲೇಖನಗಳ ಸಂಕಲನವನ್ನು, ದಂಡೆ ಎಂಬ ಕಥಾ ಸಂಕಲನವನ್ನು, ಚಂದ್ರಾವತಿ ಎಸ್. ಕಾರಂತ್ ಅವರ ನೆನಹಿನ ಕೃತಿ ಗೀತಾಂಜಲಿ ಇವುಗಳನ್ನು ಪ್ರಕಟಿಸಿದೆ.

ಇತ್ತೀಚೆಗೆ ಹೊಸಬರಿಗೆ ಹೊಸ ಹುಮ್ಮಸ್ಸನ್ನು ನೀಡುವ ನವನೋಟ ಎಂಬ ವಿನೂತನ ಕಾರ್ಯಕ್ರಮವನ್ನು ಗೋರೆಗಾಂವಿನ ಕೇಶವ ಗೋರೆ ಸಭಾಗೃಹದಲ್ಲಿ ನಡೆಸಲಾಯಿತು. ಇದನ್ನು ಜ್ಯೋತಿ ಬೆಳಗಿ ಉದ್ಘಾಟಸಿದಿದವರು ಚೈತನ್ಯಶೀಲ ಸಂಘಟಕಿ ಉಷಾ ಎಸ್. ಶೆಟ್ಟಿ. ಅವರು ತಮ್ಮ ಉಘ್ಘಾಟನಾ ಭಾಷಣದಲ್ಲಿ ನವನೋಟ ಒಂದು ವಿಶಿಷ್ಟ ರೀತಿಯ ಕಾರ್ಯಕ್ರಮ. ಇದು ಹೊಸ ವಿಚಾರ ಮತ್ತು ಹೊಸ ಪ್ರತಿಭೆಗಳ ಹುಡುಕಾಟದ ವೇದಿಕೆಯಂತಿದೆ. ಇದರ ಜೊತೆಗೆನೆ ಹೊಸ ವಿವೇಕದ ಸ್ಫೂರ್ತಿಯನ್ನು ಇಲ್ಲಿ ಭಾಗವಹಿಸುವವರು ಪಡೆಯುತ್ತಾರೆ ಎಂದು ನನಗೆ ವಿಶ್ವಾಸವಿದೆ.

ಅವರು ಮುಂದುವರಿಯುತ್ತಾ ಇಂದಿನ ಈ ಕಾರ್ಯಕ್ರಮದಲ್ಲಿ ನ್ಯಾಯದ ತಿಮಿರ ಮತ್ತು ನೆನಹಿನ ನಮನ ಎಂಬ ಹೊಸ ಪರಿಯ ಗೋಷ್ಠಿಗಳು ನಡೆಯಲಿದೆ. ನ್ಯಾಯದ ತಿಮಿರಕ್ಕೆ ಗಣೇಶ್ ಕುಮಾರ್ ಮುಖ್ಯ ಎಂಬ ಯುವ ಶಕ್ತಿ ಅತಿಥಿಗಳಾಗಿದ್ದು, ಪ್ರಗತಿಪರ ಬಂಡಾಯದ ತನ್ನಿಮಾನಿಗ, ಸಮಾನತೆಯ ಗುಡುಗು ಮಾಯಂದಾಲ್, ಅಸಮಾನತೆಗೆ ಸಿಡಿದ ಕಲ್ಲುಟ್ಟಿ, ಮಹಿಳಾ ಸ್ವಾಭಿಮಾನದ ಸಿರಿ ವಿಷಯದ ಬಗ್ಗೆ ವಿಚಾರ ಮಂಡನೆ ನಡೆಯಲಿದೆ. ಅದರಲ್ಲಿ ಭಾಗವಹಿಸುತ್ತಿರವ ಹೆಚ್ಚುಕಡಿಮೆ ಎಲ್ಲರದ್ದೂ ಹೊಸ ಉಪನ್ಯಾಸದ ಮುಖಗಳಾಗಿದ್ದು ಅವರುಗಳಲ್ಲಿ ಸುಮಂಗಲ ಜಿ. ಶೆಟ್ಟಿ, ರಘುನಾಥ್ ಜೆ. ಹಳೆಯಂಗಡಿ, ರಂಜನಿ ರಮೇಶ್ ಮೊಯಿಲಿ, ಸುಗಂಧಿ ಶ್ಯಾಮ್ ಹಳೆಯಂಗಡಿ ಅವರು ನ್ಯಾಯದ ತಿಮಿರಕ್ಕೆ ಬೆಳಕು ಚೆಲ್ಲಲು ಸಮರ್ಥರು ಎಂದು ಭಾವಿಸುತ್ತೇನೆ.

goregav-2

ಅದರ ಜೊತೆಗೆ ಗತಿಸಿದರೂ ನಮ್ಮ ಮನೋಪಟಲದಲ್ಲಿ ಮರೆಯಾಗಬಾರದ ವೀರ ನಾರಿ ಕಿತ್ತೂರು ಚೆನ್ನಮ್ಮ, ಸ್ವಾತಂತ್ರ್ಯ ಸೇನಾನಿ ಭಾಯಿ ದಾಮೋದರ ಬಂಗೇರ, ಮಿನುಗುತಾರೆ ಕಲ್ಪನಾ, ನಟ ಸಾರ್ವಭೌಮ ಡಾ. ರಾಜ್‍ಕುಮಾರ್ ಇವರ ಬಗ್ಗೆ ಕ್ರಮವಾಗಿ ಉಪನ್ಯಾಸ ನೀಡಲಿರುವ ರಜನಿ ಪೈ, ಎಸ್. ಪರಸಪ್ಪ, ವಸುಧ ಅರ್. ನಾಯಕ್, ಕಟ್ಪಾಡಿ ಮೀರಾ ಕೃಷ್ಣ ಅವರಿಂದ ಹೊಸ ಒಳನೋಟ ಹೊರಹೊಮ್ಮಲಿದೆ. ಈ ಗೋಷ್ಠಿಯ ಮುಖ್ಯ ಅತಿಥಿಗಳಾಗಿರುವ ಸುಮಿತ್ರಾ ಬಿ. ಗುಜರನ್‍ಅವರ ಹಿರಿತನ ದೊರೆತಿದೆ. ಇಲ್ಲಿ ಪ್ರತಿಭಾ ಶೋಧನೆಯೂ ಇದೆ. ಜೊತೆ ಶಿಸ್ತೂ ಇದೆ. ಇದಕ್ಕೆ ಶುಭವಾಗಲಿ ಎಂದು ನುಡಿದರು.

ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ಶಕುಂತಲಾ ಅರ್. ಪ್ರಭು ಅವರು ತನ್ನ ಆಶಯ ಭಾಷಣದಲ್ಲಿ ನಿಶ್ಚಿತ ಗುರಿ, ನಿರ್ಮಲ ಮನಸ್ಸು, ಹೊಸ ವಿಚಾರ, ಹೊಸ ಪ್ರತಿಭೆಗಳ ಹುಡುಕಾಟ ನವನೋಟದ ಅಂತರಂಗವಾಗಿದೆ. ನಮ್ಮ ಸಾಧನೆಯ ಹಾದಿ ಸಮಕಾಲಿನತೆ ಮತ್ತು ಸರ್ವಕಾಲಿಕ ಸಮಯ ಪ್ರಜ್ಞೆಯ ಜೊತೆಗೆ ಅತ್ಯಂತ ಸೂಕ್ಷ್ಮವಾದ ವಿವೇಕಯುತ ಎಚ್ಚರ ಅಗತ್ಯವಾಗಿದೆ.

ಕನ್ನಡದ ಆದಿ ಮಹಾಕವಿ ಪಂಪ ‘ಮನುಜಕುಲಂ ಓಂದೇ ವಲಂ’ ಎಂದಿದ್ದರೆ ಬಸವಣ್ಣ `ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ’ ಎಂದದ್ದೂ ಅಂದಿನ ಕಾಲದ ನವನೋಟವೇ ಹೌದು ಎಂದು ಎಂದರಲ್ಲದೆ; ಅದರೊಡನೆ ಮುಂಬಯಿ ಠಾಣೆ ಜಿಲ್ಲೆಗಳ 7 ತಂಡಗಳಿಂದ ಜನಪ್ರೀಯ ಹಾಡುಗಳ ವೃಂದಗಾನ ಮತ್ತು ಸಂಘದ ವಿಭಾಗಗಳಿಂದ ಗೀತಾವಂದನ ನಡೆಯುತ್ತದೆ.

gore-3

ಇದರಲ್ಲಿ ಬಿಲ್ಲವರ ಎಸೋಸಿಯೇಶನಿನ ಗೋರೆಗಾಂವ್ ಶಾಖೆಯ ವಿಶ್ವನಾಥ್ ಪೂಜಾರಿ ತಂಡ, ಅರ್.ಎಸ್.ಬಿ. ಎಸೋಸಿಯೇಶನಿನ ರಮಾ ರಾ. ನಾಯಕ್ ತಂಡ, ಬಿಲ್ಲವರ ಎಸೋಸಿಯೇಶನಿನ ಭಾಯಿಂದರ್ ಶಾಖೆಯ ಸದಾನಂದ ಎ. ಸುವರ್ಣ ತಂಡ, ಚಾರ್‍ಕೋಪ್ ಕನ್ನಡ ಬಳಗದ ರಾಜೀವಿ ಕೋಟ್ಯಾನ್ ತಂಡ, ಬಿಲ್ಲವರ ಎಸೋಸಿಯೇಶನಿನ ಮೀರಾರೋಡ ಶಾಖೆಯ ಲೀಲಾ ಗಣೇಶ್ ಕಾರ್ಕಳ ತಂಡ, ವರದ ಸಿದ್ಧಿ ವಿನಾಯಕ ಮಂಡಳಿಯ ಜ್ಯೋತಿ ಪಾಟ್ಕರ್ ತಂಡ, ವೀರಕೇಸರಿ ಕಲಾ ವೃಂದದ ಮಮತಾ ಭಟ್ ತಂಡ, ನಮ್ಮ ಯುವ ವಿಭಾಗದ ಸಂಚಾಲಕಿ ಸುಚಲತ ಪೂಜಾರಿ ತಂಡ, ಮಹಿಳಾ ವಿಭಾಗದ ಸೀಮಾ ಕುಲಕರ್ಣಿ ತಂಡ, ರಂಗಸ್ಥಳದ ವಾಣಿ ಶೆಟ್ಟಿ ಮೂಡಬಿದ್ರಿ ತಂಡ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ.

ಈ ಕಾರ್ಯಕ್ರಮದ ಸಮಾರೋಪದಲ್ಲಿ ಹಿರಿಯ ಲೇಖಕಿ ಶಾಂತಾ ವಿ. ಶೆಟ್ಟಿ ಅವರ ಮಾತಿನ ಜೊತೆಗೆ ಸಂಘದ ಮಾಜಿ ಅಧ್ಯಕ್ಷರುಗಳಾದ ಪಯ್ಯಾರು ರಮೇಶ್ ಶೆಟ್ಟಿ, ಜಿ.ಟಿ. ಆಚಾರ್ಯ, ರವಿ ರಾ. ಅಂಚನ್ ಅವರುಗಳಿಂದ ನಮನದ ನುಡಿ ನಡೆಯಲಿದೆ. ಇದಕ್ಕೆಲ್ಲಾ ನಿಮ್ಮಗಳ ಒಮ್ಮನಸಿನ ಒಲವು ಅಗತ್ಯ ಎಂದು ನುಡಿದರು.

goregav

ಸಂಘದ ಅಧ್ಯಕ್ಷರಾದ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ತನ್ನ ಶುಭ ನುಡಿಯಲ್ಲಿ ನವನೋಟ ನಮ್ಮ ಗ್ರಂಥಾಯನ ವಿಭಾಗದ ಒಂದು ಮಹತ್ವಾಕಾಂಕ್ಷಿ ಯೋಜನೆಯ ಭಾಗ. ಇದು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು; ಮಾದರಿಯಾಗಬೇಕು ಎಂದು ತಿಳಿಸಿದರು.

ಗ್ರಂಥಾಯನದ ನಿರ್ದೇಶಕಿ ಅಪರ್ಣಾ ವಿ. ರಾವ್ ತನ್ನಸ್ವಗತದ ಮಾತಿನಲ್ಲಿ ಮಾತಿನಲ್ಲಿ ಗ್ರಂಥಾಯನ ವಿಭಾಗ ನಡೆದು ಬಂದ ದಾರಿಯ ಪ್ರಸ್ತಾವನೆ ಇತ್ತರು. ಸಂಘದ ಗೌ. ಪ್ರ. ಕಾರ್ಯದರ್ಶಿ ಜಯಕರ ಡಿ. ಪೂಜಾರಿಯವರು ಕಾರ್ಯಕ್ರಮದ ನವ ಸ್ವರೂಪಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಲ್ಲದೆ ಇದರ ಸಫಲತೆಗೆ ಕಾರಣರಾದ ಸದಸ್ಯರನ್ನು, ದಾನಿಗಳನ್ನು ಮತ್ತು ಪ್ರೇಕ್ಷಕರನ್ನು ಅಭಿನಂಧಿಸಿದರು. ಗ್ರಂಥಾಯನದ ಸಂಚಾಲಕಿ ಲಲಿತಾ ಪ್ರಭು ಅಂಗಡಿಯವರು ಕಾರ್ಯಕ್ರಮದ ಸಂಚಾಲನೆ ಮಾಡಿದರು.

By suddi9

Leave a Reply

Your email address will not be published. Required fields are marked *