ವಾಷಿಂಗ್ಟನ್: ಮೊದಲಿಂದಲೂ ಹಲವು ವಿವಾದಗಳಿಗೆ ಈಡಾಗಿದ್ದ, ಸಮೀಕ್ಷೆಗಳಲ್ಲಿ ಸೋಲನುಭವಿಸಬಹುದೆಂದು ಅಂದಾಜಿಸಲ್ಪಟ್ಟಿದ್ದ ಡೊನಾಲ್ಡ್ ಟ್ರಂಪ್ ಈಗ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿನ ಹೊಸ್ತಿಲಲ್ಲಿದ್ದಾರೆ.
ಗ್ರಾಮೀಣ ಭಾಗದ ಜನರು ಹಾಗೂ ಬಿಳಿಯ ಜನಾಂಗದವರು ಟ್ರಂಪ್’ಗೆ ಹೆಚ್ಚು ಒಲವು ತೋರಿರುವುದು ಕಂಡುಬಂದಿದೆ. ಡೆಮಾಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಸಾಕಷ್ಟು ಮತಗಳ ಅಂತರದ ಮುನ್ನಡೆ ಹೊಂದಿದ್ದಾರೆ. ನ್ಯೂಯಾರ್ಕ್’ನಂತರ ನಗರ ಭಾಗಗಳಲ್ಲಿ ಹಿಲರಿ ಬೆಂಬಲ ಪಡೆದಿದ್ದಾರೆ. ಫ್ಲೋರಿಡಾ ರಾಜ್ಯದ ಮತದಾರರು ಟ್ರಂಪ್’ಗೆ ಒಲವು ತೋರಿದ್ದು ನಿರ್ಣಾಯಕವೆನಿಸಿದೆ. ನಮ್ಮಲ್ಲಿ ಉತ್ತರಪ್ರದೇಶವಿದ್ದಂತೆ ಅಮೆರಿಕಾದಲ್ಲಿ ಫ್ಲೋರಿಡಾ ರಾಜ್ಯವಿದೆ. ಈ ರಾಜ್ಯದಲ್ಲಿ ಸಿಕ್ಕ ಗೆಲುವು ಟ್ರಂಪ್ ಅವರನ್ನು ಸರಿಯಾದ ಹಳಿಗೆ ತಂದು ನಿಲ್ಲಿಸಿತೆನ್ನಲಾಗಿದೆ.

