ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ಕ್ರಾಸ್ಕಂಟ್ರಿ ಚಾಂಪಿಯನ್ಶಿಪ್ಗೆ ಮೂಡಬಿದಿರೆಯಲ್ಲಿ ಸ್ವರಾಜ್ಯ ಮೈದಾನದಲ್ಲಿ ಅ.28ರಂದು ಚಾಲನೆ ನೀಡಲಾಯಿತು.


ರಾಜೀವ್ಗಾಂಧಿ ಆರೋಗ್ಯ ವಿ.ವಿ. ಬೆಂಗಳೂರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ. ರಾಷ್ಟ್ರದ ಸುಮಾರು 200 ವಿ.ವಿ.ಗಳಿಂದ 3000 ಮಂದಿ ಕ್ರೀಡಾಪಟುಗಳು ಭಾಗವಹಿಸಿದರು.


ಶುಕ್ರವಾರ ಮುಂಜಾನೆ 6.45ಕ್ಕೆ ಮಹಿಳೆಯರ 6 ಕಿ.ಮೀ ಸ್ಪರ್ಧೆ ಹಾಗೂ 7.30 ನಿಮಿಷಕ್ಕೆ ಪುರುಷರ 12 ಕಿ.ಮೀ. ಸ್ಪರ್ಧೆ ಆರಂಭಗೊಂಡಿತು.




