ಮೂಡುಬಿದಿರೆ: ಅಲಂಗಾರು ಹೋಲಿ ರೊಸರಿ ಚರ್ಚ್ ವಾರ್ಷಿಕ ಹಬ್ಬವನ್ನು ಅಕ್ಟೊಬರ್ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

mbd_oct-26-2

35 ಧರ್ಮಗುರುಗಳು ಅರ್ಪಿಸಿದ ಬಲಿಪೂಜೆಯ ನೇತೃತ್ವವನ್ನು ಬಿಹಾರದ ಪಾಟ್ನ ಮಹಾ ಧರ್ಮಪ್ರಾಂತ್ಯದ ಮಹಾ ಧರ್ಮಾದ್ಯಕ್ಷ ಪೂಜ್ಯ ಡೊ.ವಿಲ್ಲಿಯಂ ಡಿ’ಸೋಜ ವಹಿಸಿದರು. ಹಬ್ಬದ ಆಚರಣೆ ನಮ್ಮ ಸಂಸ್ಕೃತಿಯನ್ನು ಉಳಿಸುತದೆ. ಸಂಬಂದಗಳನ್ನು ಬೆಳೆಸುತದೆ ಎಂದರು.

ಮೂಡಬಿದಿರೆ ವಲಯದ ಮುಖ್ಯ ಧರ್ಮಗುರು ರೆ.ಫಾ ಪೌಲ್ ಸಿಕ್ವೇರಾ ಪ್ರಬೋದನೆಯನ್ನು ನೀಡಿ, ಪ್ರೀತಿಯಿಂದ ತುಂಬಿದ ಕುಟುಂಬಗಳನ್ನು ಕಟ್ಟಲು ಕರೆಯಿತ್ತರು.

ಶಾಸಕ ಕೆ.ಅಭಯಚಂದ್ರ ಜೈನ್ ಚರ್ಚಿಗೆ ಬೇಟಿ ನೀಡಿದರು. ಧರ್ಮಗುರು ರೆ.ಫಾ ಬಾಸಿಲ್ ವಾಸ್ ಹಾಗು ಫಾ.ಕೆನ್ನೆತ್ ಕ್ರಾಸ್ಟ ವಂದಿಸಿದರು. ಉಪಾದ್ಯಕ್ಷ ಜೆರಾಲ್ಡ್ ಲೋಬೊ ಕಾರ್ಯದರ್ಶಿ ಸಂತೋಶ್ ರೊಡ್ರಿಗಸ್, ಪುರಸಭಾ ಸದಸ್ಯ ಪಿ. ಕೆ. ಥೋಮಸ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *