ಕೈಕಂಬ: ಜನಪರ ಹಿತಕ್ಕಾಗಿ ಗುರುಪುರದ ಸೇವಾ ಬಿ.ಗ್ರೇಡ್‍ನ ವತಿಯಿಂದ ಆ್ಯಂಬುಲೆನ್ಸ್ ವಾಹನ ಸಮರ್ಪಣಾ ಸಮಾರಂಭ ಅ.23ರಂದು ಬೆಳಿಗ್ಗೆ 9.30ಕ್ಕೆ ಗುರುಪುರದಲ್ಲಿ ಹಮ್ಮಿಕೊಳ್ಳಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಗುರುಪುರದಲ್ಲಿ ತುರ್ತು ವಾಹನವೊಂದು ಅಗತ್ಯವಿದ್ದರಿಂದ ದಾನಿಗಳ ಸಹಕಾರದೊಂದಿಗೆ ಬಿ.ಗ್ರೇಡ್ ಸಂಘ ಊರಿಗೆ ಆ್ಯಂಬುಲೆನ್ಸ್ ಒದಗಿಸಿ ಕೊಡಲು ಮುಂದಾಗಿದೆ ಎಂದು ಸೇವಾ ಬಿ.ಗ್ರೇಡ್ ಪ್ರಕಟನೆ ತಿಳಿಸಿದೆ.

