ಬಜಪೆ: ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಬಜಪೆ ಶ್ರೀ ಶಕ್ತಿ ಮಂಟಪದಲ್ಲಿ ಜರಗಿದ ಮೂರು ದಿನಗಳ 24ನೇ ವರ್ಷದ ಶ್ರೀ ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸೋಮವಾರ ಸಂಪನ್ನಗೊಂಡಿತು. ಸಾಂಸ್ಕೃತಿಕ ಸನ್ನಿವೇಶಗಳ ಸ್ತಬ್ಧ ಚಿತ್ರಗಳು, ಹುಲಿ ವೇಷಗಳು, ಚೆಂಡೆ-ವಾದ್ಯ ಘೋಷ, ತಾಲೀಮು, ಭಜನೆ, ಹೀಗೆ ಸಾಲಾಂಕೃತ ಮೆರವಣಿಗೆಗೆ ಬಜಪೆ ಶ್ರೀ ಶಕ್ತಿ ಮಂಟಪದಿಂದ ಹೊರಟು ಮರವೂರು ಫಲ್ಗುಣಿ ನದಿಯಲ್ಲಿ ವಿಸರ್ಜನೆಗೊಂಡಿತು.

ಅಲಂಕೃತಗೊಂಡ ಬಜಪೆ ಶ್ರೀ ಶಾರದೆ
ಶಿಬರೂರು ಅನಂತ ಪದ್ಮನಾಭ ಆಚಾರ್ಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರಗಿದವು. ಆರ್ಎಸ್ಎಸ್ ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಸಮಾರಂಭಕ್ಕೆ ಭೇಟಿ ನೀಡಿದ್ದು ಸಮಿತಿಯ ವತಿಯಿಂದ ಗೌರವಿಸಲಾಯಿತು.

ಶಾರದೋತ್ಸವ ಸಮಿತಿಯ ಅಧ್ಯಕ್ಷ ಪ್ರದೀಪ್ ಸುವರ್ಣ, ಕಾರ್ಯದರ್ಶಿ ಕೃಷ್ಣರಾಜ್ ಹಾಗೂ ಎಲ್ಲಾ ಪದಾಧಿರಿಗಳು ಉಪಸ್ಥಿತರಿದ್ದರು.


