ಬಜಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಗೆ ವಜ್ರ ಖಚಿತ ಚಿನ್ನದ ಕಿರೀಟವನ್ನು ಶುಕ್ರವಾರ ರಾತ್ರಿ ಸಮರ್ಪಣೆ ಮಾಡಲಾಯಿತು.
ಮುಂಬಯಿ ಉದ್ಯಮಿ ಕರುಣಾಕರ ಶೆಟ್ಟಿ ಹಾಗೂ ಬಜಪೆ ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಜಗದೀಶ ಸಿ. ಶೆಟ್ಟಿ ಮರವೂರು ಅವರುಗಳು ಸೇವಾ ರೂಪದಲ್ಲಿ ಲಕ್ಷಾಂತರ ಮೌಲ್ಯದ ಕಿರೀಟವನ್ನು ಕ್ಷೇತ್ರಕ್ಕೆ ಸಮರ್ಪಿಸಿದರು. ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣನವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ದೇವಳದ ವಾಸುದೇವ ಆಸ್ರಣ್ಣ ಡಾ| ಕೆ. ರವೀಂದ್ರನಾಥ ಪೂಂಜ ಹಾಗೂ ಅರ್ಚಕರುಗಳಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ರಾಘವೇಂದ್ರ ಆಚಾರ್ಯ ಬಜಪೆ, ರವಿರಾಜ ಆಚಾರ್ಯ ಬಜಪೆ, ಕಿರೀಟ ಮಾಡಿದ ಲಕ್ಷ್ಮೀನಾರಾಯಣ ಸೇಠ್, ಪ್ರವೀಣ್ ಭಂಡಾರಿ, ಬಜಪೆ ಸೇವಾ ಸಹಕಾರಿ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕರು ರತ್ನಾಕರ್ ಶೆಟ್ಟಿ, ಬಿ. ರಾಮಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

