ಕೈಕಂಬ: ಇಂದು ನಸುಕಿನ ಜಾವವೇ ದುಷ್ಕಮರ್ಿಗಳ ತಂಡವೊಂದು ಹಟ್ಟಿಗೆ ನುಗ್ಗಿ ನಾಲ್ಕು ದನಗಳನ್ನು ಕದ್ದು ಟಾಟಾಸುಮೋದಲ್ಲಿ ಹಾಕಿಸಿ ಮೂಡಬಿದ್ರೆ ಕಡೆಗೆ ಪರಾರಿಯಾದ ಘಟನೆ ಕುಪ್ಪೆಪದವಿನ ಕಟ್ಟೆಮಾರ್ ಎಂಬಲ್ಲಿ ನಡೆದಿದೆ. ವಕೀಲರಾದ ಭಾಸ್ಕರ ಕಟ್ಟೆಮಾರ್ ಎಂಬವರ ಮನೆಯಲ್ಲೇ ಈ ಘಟನೆ ನಡೆದಿದ್ದು ದುಷ್ಕರ್ಮಿಗಳ ಆಟಾಟೋಪದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ವಿವರ: ಭಾಸ್ಕರ ಕಟ್ಟೆಮಾರ್ ಎಂಬವರ ಮನೆಯಲ್ಲಿ ವಾಸ್ತವ್ಯವಿರುವ ಪುನೀತ್ ಕುಮಾರ್ ಎಂಬವರು ನಿದ್ದೆಗೆ ಜಾರಿದ್ದರು. ಈ ವೇಳೆ ನಸುಕಿನ ಜಾವ ಹಟ್ಟಿಯ ಸಮೀಪ ಸದ್ದುಕೇಳುವುದನ್ನು ಕಂಡ ಪುನೀತ್ ಕುಮಾರ್ ಹಟ್ಟಿಯ ಸಮೀಪ ಅವರೆದುರೇ ಕತ್ತಿ ಝಳಪಿಸುತ್ತಾ ಟಾಟಾಸುಮೋದಲ್ಲಿ ದನಗಳನ್ನು ಯಾತನಾಮಯವಾಗಿ ಹತ್ತಿಸಿ ಮೂಡಬಿದ್ರೆ ಕಡೆಗೆ ಪರಾರಿಯಾಗಿದ್ದಾರೆ. ತಕ್ಷಣ ಅವರು ಸ್ಥಳೀಯರನ್ನು ಸೇರಿಸಿ ವಾಹನವನ್ನು ಬೆನ್ನತ್ತಿದ್ದರೂ ದುಷ್ಕರ್ಮಿಗಳು ಪರಾರಿಯಾ
ಗಿದ್ದಾರೆ. ಕಳವಿಗೀಡಾದ ದನಗಳ ಮೌಲ್ಯ ಒಂದೂವರೆ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇವುಗಳು ಹಾಲು ಕೊಡುವ ಹಸುಗಳು ಎಂದು ಪುನೀತ್ ತಿಳಿಸಿದ್ದಾರೆ.
ಪೊಲೀಸರಿಂದ ನಿರ್ಲಕ್ಷ್ಯ ಆರೋಪ:
ಘಟನೆ ನಡೆಯುತ್ತಿದ್ದಂತೆ ಬಜ್ಪೆ ಹಾಗೂ ಮೂಡಬಿದ್ರೆ ಪೊಲೀಸರಿಗೆ ತಿಳಿಸಿದ್ದರೂ ಪೊಲೀಸರು ಮಾತ್ರ ಯಾವ ಕ್ರಮ ಕೈಗೊಳ್ಳದೆ ಇರುವುದರ ಬಗ್ಗೆ ಸ್ಥಳೀಯರಿಂದ ಖಂಡನೆ ವ್ಯಕ್ತವಾಗಿದೆ. ವಾಹನ ಮೂಡಬಿದ್ರೆಗೆ ತೆರಳಿದ್ದು ತಕ್ಷಣ ಕ್ರಮಕೈಗೊಳ್ಳುವಂತೆ ತಿಳಿಸಿದರೂ ಅವರು ನಿರ್ಲಕ್ಷ್ಯ ತಾಳಿದ್ದರಿಂದ ಪೊಲೀಸರು ಸ್ಪಾಟ್ಗೆ ತೆರಳದೆ ದನಕಳ್ಳರಿಗೆ ನೆರವಾಗಿದ್ದಾರೆ. ಅಲದೆ ಜಿಲ್ಲಾ ಕಂಟ್ರೋಲ್ ರೂಂಗೆ ತಿಳಿಸಿದ್ದರೂ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸ್ಥಳೀಯರು ಆಖ್ರೋಶ ವ್ಯಕ್ತಪಡಿಸಿದ್ದಾರೆ.
ಎಸಿಪಿ ಸ್ಥಳಕ್ಕೆ ಬರಲಿ: ಕಳವಿಗೀಡಾದ ದನಗಳನ್ನು ಇಂದು ಸಂಜೆಯೊಳಗೆ ಹಿಡಿದು ದುಷ್ಕರ್ಮಿಗಳನ್ನು ಹಿಡಿದು ಜೈಲಿಗಟ್ಟಬೇಕು. ಈ ಬಗ್ಗೆ ಮುತುವರ್ಜಿ ವಹಿಸಲು ಸ್ವತಃ ಎಸಿಪಿ ರವಿಕುಮಾರ್ ಸ್ಥಳಕ್ಕಾಗಮಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದು, ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ

