ಸುದ್ದಿ9 ಕೈಕಂಬ : ಕರ್ನಾಟಕ ಸರಕಾರದ ಮಾನವ ಹಕ್ಕು ಆಯೋಗದ ಸದಸ್ಯೆ ಮೀರಾ ಸಕ್ಷೇನಾ (ಐ.ಎ.ಎಸ್) ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪೊಳಲಿಗೆ ಆಗಮಿಸಿದ ಅವರಿಗೆ ದೇವಾಲಯದ ವತಿಯಿಂದ ಪರಮೇಶ್ವರ ಭಟ್ ಪ್ರಸಾದ ನೀಡಿದರು. ಅವರೊಂದಿಗೆ ಉಡುಪಿ ಜಿಲ್ಲಾ ಮಾನವ ಹಕ್ಕು ಪರಿಷತ್ ಸದಸ್ಯೆ ರೇಸ್ಮಾ ಉದಯ ಶೆಟ್ಟಿ , ಭಾಷಾ ಅವರು ಜತೆಗಿದ್ದರು.
ಮಂಗಳೂರಿಗೆ ಬಂದ ಅವರು ಪೊಳಲಿ ಶ್ರೀ ದೇವಿಯ ಆಕರ್ಷಣೆಯಿಂದ ದೇವಿ ಸನ್ನಿಧಿಗೆ ಬರುವಂತಾಯಿತು. ಜನವರಿ 18 ರಂದು ಮಂಗಳೂರಿಗೆ ಬಂದ ತನ್ನ ಸಹೋದರಿ ರಾಜೇಶ್ವರೀ ಮತ್ತು ಅವರ ಪುತ್ರಿ ಸೀತಾ ಅವರೊಂದಿಗೆ ಬಂದು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದೇನೆ ಎಂದರು. ಇಲ್ಲಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಾಲಯಕ್ಕೆ ತೆರಳಿ ನಂತರ ಉಡುಪಿ ಮಾನವ ಹಕ್ಕು ಆಯೋಗದ ಕಟ್ಟಡ ಉದ್ಘಾಟನೆಯನ್ನು ನೆರವೇರಿಸುವರು ಎಂದಿ ತಿಳಿಸಿದರು.






