ವಿಟ್ಲ ಹಾಸ್ಟೇಲ್‍ನಿಂದ ಮನೆಗೆಂದು ಹೋದವಳು ಹಿಂತಿರುಗಿ ಬಾರದೇ ನಾಪತ್ತೆಯಾಗಿದ್ದ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯನ್ನು ವಿಟ್ಲ ಪೊಲೀಸರು ಗುರುವಾರ ಹಾಸನದಲ್ಲಿ ಪತ್ತೆ ಹಚ್ಚಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ನಲ್ಲೂರು ಗ್ರಾಮದ ಮಲ್ಲೇಗೌಡ ಅವರ ಪುತ್ರಿ, ವಿಟ್ಲದ ಹಿಂದುಳಿದ ವರ್ಗಗಳ ದೇವರಾಜು ಅರಸು ವಸತಿಗೃಹದಲ್ಲಿ ವಾಸವಾಗಿದ್ದ ಪುಷ್ಪಾ ಎನ್.ಡಿ (21) ಆ.11 ರಿಂದ ನಾಪತ್ತೆಯಾಗಿದ್ದಳು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಹಾಸನ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆ ತಂದಿದ್ದಾರೆ. ನನಗೆ ಮನೆಗೆ ಹೋಗಲು ಮನಸ್ಸಿರಲಿಲ್ಲ. ಆದುದರಿಂದ ಬೇರೆ ಕಡೆಗೆ ತೆರಳಿದ್ದೇನೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

By suddi9

Leave a Reply

Your email address will not be published. Required fields are marked *