ಬಿಎಂಎಸ್ ವಿಟ್ಲ ಇದರ ವತಿಯಿಂದ ವಿಟ್ಲ ಭಗವತಿ ದೇವಸ್ಥಾನದಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ರಕ್ಷಾ ಬಂಧನದ ಮಹತ್ವದ ಬಗ್ಗೆ ಪುತ್ತೂರು ಮಂಡಲ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ ಹರಿಪ್ರಸಾದ್ ಯಾದವ್ ಭೌದಿಕ್ ನೀಡಿದರು. ಈ ಸಂದರ್ಭದಲ್ಲಿ ಬಿ ಎಂ ಎಸ್ ಕಾರ್ಯಕರ್ತ ನಾರಾಯಣ ಚಂದಳಿಕೆಯವರು ಹೃದಯ ಸಂಭಂದಿ ರೋಗದಿಂದ ಬಳಲುತ್ತಿದ್ದು ಅವರ ಚಿಕಿತ್ಸಾ ವೆಚ್ಚಕ್ಕೆ 10,000 ನಗದನ್ನು ಬಿ ಎಂ ಎಸ್ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಬಿ ಎಂ ಎಸ್ ಅಧ್ಯಕ್ಷ ಪ್ರಸಾದ್ ಕೂಜಪ್ಪಾಡಿ, ಸಂಘಟನಾ ಕಾರ್ಯದರ್ಶಿ ರವಿ ಕೂಡೂರು, ಸದಸ್ಯರುಗಳಾದ ಯಾದವ, ಸದಾಶಿವ ಗೌಡ, ವಸಂತ ಅನಿಲಕಟ್ಟೆ, ಮಧುಕರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ ಮೂಡಂಬೈಲು, ದಯಾನಂದ ಉಜಿರೆಮಾರು, ಸಂಘದ ಪ್ರಮುಖ್ ವಿಘ್ನೇಶ್ ಮೊದಲಾದವರು ಉಪಸ್ತಿತರಿದ್ದರು.

