ಕರಾಚಿ: ಕರಾಚಿ ವಿಮಾನದ ನಿಲ್ದಾಣದ ಮೇಲೆ ಇಂದು ಮಧ್ಯಾಹ್ನ ದಿಢೀರನೆ ದಾಳಿ ನಡೆಸಿದ ಉಗ್ರರು ಭದ್ರತಾ ಪಡೆಗಳ ಪ್ರತಿ ದಾಳಿಯಿಂದ ಹಿಮ್ಮೆಟ್ಟಿದ್ದಾರೆ. ದಾಳಿಗಿಳಿದಿದ್ದ 10 ಮಂದಿ ಉಗ್ರರು ಆಶ್ಚರ್ಯಕರ ರೀತಿಯಲ್ಲಿ ಭಧ್ರತಾ ಪಡೆಗಳ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಅಧಿಕಾರಿಗಳು ವಿಮಾನದ ನಿಲ್ದಾಣವನ್ನು ಮತ್ತೆ ಸ್ವಾಧೀನಕ್ಕೆ ಪಡೆಯುತ್ತಿದ್ದಂತೆ ವಿಮಾನಗಳ ಹಾರಾಟವನ್ನು ಪುನರಾರಂಭಿಸಿದರು.
ದಾಳಿಯಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ. ಗಮನಾರ್ಹವೆಂದರೆ ಭಾನುವಾರ ರಾತ್ರಿ ಇದೇ ಉಗ್ರರು (ತೆಹ್ರೀಕ್-ಇ-ತಾಲಿಬನ್ ಭಯೋತ್ಪಾದಕ ಸಂಘಟನೆ) ಇದೇ ಸ್ಥಳದಲ್ಲಿ ಅಟ್ಟಹಾಸ ಮೆರೆದು 29 ಮಂದಿ ಸಾವಿಗೆ ಕಾರಣರಾಗಿದ್ದರು. ಅದಾದ ನಂತರ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಭದ್ರತಾ ಪಡೆಗಳು ಭಾರಿ ಕಾವಲು ಕಾಯುತ್ತಿದ್ದರು.

