ನವದೆಹಲಿ: ದೇಶದ ಅಭಿವೃದ್ಧಿಗೆ ಪೂರಕವಾದ ಐಡಿಯಾಗಳಿವೆಯೇ? ಹಾಗಿದ್ದರೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದನ್ನೇ ಇ-ಮೇಲ್ ಮಾಡಿ ತಿಳಿಸಿಬಿಡಿ! ಅದರಲ್ಲೂ ಸರ್ಕಾರಿ ಅಧಿಕಾರಿಗಳು ತಮ್ಮ ಉತ್ತಮ ಚಿಂತನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ತಿಳಿಸಿದ್ದಾರೆ. ಇದು ಅನೇಕ ಅಧಿಕಾರಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

modi

ಇತ್ತೀಚೆಗಷ್ಟೇ ಮೂಲಸೌಕರ್ಯ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಧ್ಯಮ ಶ್ರೇಣಿಯ ಅಧಿಕಾರಿಯೊಬ್ಬರು ಪ್ರಧಾನಿ ಮೋದಿಗೆ ಇ-ಮೇಲ್ ಮಾಡಿ, ತಮ್ಮಲ್ಲಿ ಮೊಳಕೆಯೊಡೆದಿದ್ದ ಚಿಂತನೆಯನ್ನು ಹಂಚಿಕೊಂಡಿದ್ದರು. ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆಯೂ ನಗರಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ಅವರು ಮಿಂಚಂಚೆಯಲ್ಲಿ ವಿವರಿಸಿದ್ದರು. ಅದಾಗುತ್ತಿದ್ದಂತೆ ಮೂರೇ ದಿನಗಳಲ್ಲೇ ಮೋದಿಯವರಿಂದ ಪ್ರತಿಕ್ರಿಯೆ ಬಂದಿದೆ. ಅಧಿಕಾರಿಯ ಚಿಂತನೆಯನ್ನು ಪ್ರಧಾನಿ ಶ್ಲಾಘಿಸಿದ್ದೇ ಅಲ್ಲದೆ, ಈ ವಿಚಾರವನ್ನು ಮುಂದೆ ಸಂಬಂಧಪಟ್ಟವರೊಂದಿಗೆ ಚರ್ಚೆಗೆ ತೆಗೆದುಕೊಳ್ಳುವೆ ಎಂದೂ ಹೇಳಿದ್ದಾರೆ. ನನ್ನ ಇ-ಮೇಲ್ ಗೆ ಸ್ವತಃ ಪ್ರಧಾನಿಯೇ ಪ್ರತಿಕ್ರಿಯಿಸಿರುವುದನ್ನು ನನಗೆ ನಂಬಲಾಗುತ್ತಿಲ್ಲ. ನಮ್ಮ ಸಲಹೆಗಳನ್ನು ಆಲಿಸುವಂತಹ ಪ್ರಧಾನಿಯೊಬ್ಬರು ಸಿಕ್ಕಿರುವುದು ನಮ್ಮಲ್ಲಿ ಸ್ಫೂರ್ತಿ ತಂದಿದೆ ಎಂದು ಸದರಿ ಅಧಿಕಾರಿ ಸಂತಸಪಟ್ಟಿದ್ದಾರೆ.

By suddi9

Leave a Reply

Your email address will not be published. Required fields are marked *