ಕಿನ್ನಿಗೋಳಿ : ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರವೂ ಪ್ರಾಮುಖ್ಯವಾದುದು. ವಿದ್ಯಾರ್ಥಿಗಳಲ್ಲಿ ಉತ್ತಮವಾದ ಚಿಂತನೆಯನ್ನು ರೂಪಿಸಿ ಅವರನ್ನು ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಶಿಕ್ಷಕರದ್ದು ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಶಿಕ್ಷಕ ಹರಿರಾವ್ ಹೇಳಿದರು. ಅವರು ಕಿನ್ನಿಗೋಳಿ ಸಮೀಪದ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿ ಕ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಈ ಸಂದರ್ಭ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಿನ್ನಿಗೋಳಿ ಜಿ. ಪಂ. ಸದಸ್ಯ ವಿನೋದ್ ಕುಮಾರ್, ಕಿನ್ನಿಗೋಳಿ ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಮಾಜಿ ಜಿ. ಪಂ. ಸದಸ್ಯೆರಾದ ಆಶಾ ಸುವರ್ಣ, ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾ. ಪಂ. ಅದ್ಯಕ್ಷೆ ಫಿಲೋಮಿನಾ ಸಿಕ್ವೇರ, ಗ್ರಾ. ಪಂ. ಸದಸ್ಯೆ ವಾಣಿ, ಸಿಆರ್‍ಪಿ ಜಗದೀಶ ನಾವಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ರೂಪಾ, ಸಲಹೆಗಾರ ಚಂದ್ರಶೇಖರ್, ಬಾಲಕೃಷ್ಣ ಡಿ. ಸಾಲ್ಯಾನ್, ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ, ಸಹಶಿಕ್ಷಕರಾದ ಅನುರಾಧ ಸಿ.ಎನ್, ಯಶೋಧ, ಸುಷ್ಮಾ, ಸಂತೋಷ್‍ಕುಮಾರ್ ಮತ್ತಿತರರು ಇದ್ದರು.
