ಕಿನ್ನಿಗೋಳಿ:ಹಿಂದಿನ ಕಾಲದಲ್ಲಿ ಆಟಿ ಎಂದರೆ ಕಷ್ಟದ ದಿನಗಳು, ಆ ದಿನಗಳು ಇಂದು ಇಲ್ಲ ಆದರೆ ನಮ್ಮ ಮಕ್ಕಳಿಗೆ ಅದನ್ನು ತಿಳಿಯಪಡಿಸಲು ಆಟಿ ಆಚರಣೆ ಅಗತ್ಯ ಎಂದು ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶೀಲಾ ಕೆ ಶೆಟ್ಟಿ ಹೇಳಿದರು ಅವರು ಕಾಳಿಕಾಂಬ ಮಹಿಳಾ ವೃಂದ ಕಿನ್ನಿಗೋಳಿ ಇವರ ವತಿಯಿಂದ ಸರಪ್ ಅಣ್ನಯಾಚಾರ್ಯ ಸಭಾಭವನ ರಾಜರತ್ನಪುರ ಕಿನ್ನಿಗೋಳಿಯಲ್ಲಿ ನಡೆದ ಆಟಿ ಆಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಈ ಸಂದರ್ಭ ಮಹಿಳಾ ವೃಂದದ ಮಾಜಿ ಅಧ್ಯಕ್ಶೆ ಹೇಮಾ ವಿಶ್ವನಾಥ ಆಚಾರ್ಯರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮವನ್ನು ಲಲಿತಾ ಬಾಬುರಾಜ ಆಚಾರ್ಯ ದೀಪ ಬೆಳಗಿಸಿ ಉದ್ಘಟಿಸಿದರು, ಚೆನ್ನೆ ಮಣೆ ಆಟದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಮಹಿಳಾ ವೃಂದದ ಅಧ್ಯಕ್ಷೆ ಶ್ರೀಮತಿ ಗೀತಾ ಯೋಗೀಶ ಆಚಾರ್ಯ ಅಧ್ಯಕ್ಷತೆ ವಹಿಸಿದ್ದು, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶಿಲ್ಪಿ ಶಿವ ಪ್ರಸಾದ್ ಆಚಾರ್ಯ, ಸಭಾಭವನ ಸಮಿತಿ ಅಧ್ಯಕ್ಷ ಎಂ. ಪ್ರಥ್ವಿರಾಜ್ ಆಚಾರ್ಯ ಕೆ.ಬಿ ಸುರೇಶ್, ಮತ್ತಿತರರು ಇದ್ದರು. ಅನಿತಾ ವಿಶ್ವನಾಥ ಆಚಾರ್ಯ ಸ್ವಾಗತಿಸಿ, ರಾಜೇಶ್ವರೀ ಪ್ರಕಾಶ್ ಆಚಾರ್ಯ ನಿರೂಪಿಸಿದರು.
