ಕೈಕಂಬ: ಗುರುಪುರ ಕೈಕಂಬದಲ್ಲಿರುವ ಮೆಸ್ಕಾಂ ಶಾಖೆಯ ಸಮೀಪವೇ ಅಂದರೆ ಪಾಂಪೆ ಜನರಲ್ ಸ್ಟೋರ್ ಕಟ್ಟಡದ ಬಳಿ ಇನ್ನೇನು ಬೀಳುವ ಹಂತದಲ್ಲಿರುವ ತುಕ್ಕು ಹಿಡಿದ ಸ್ಥಿತಿಯಲ್ಲಿರುವ ತಂತಿಕಂಬವಿದ್ದು ಮೆಸ್ಕಾಂನ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

7 vp tanthi kambada buda

7 vp tanthi kamba
ಕಬ್ಬಿಣದ ತಂತಿಕಂಬದ ಬುಡ ತುಕ್ಕುಹಿಡಿದು ಸಂಪೂರ್ಣವಾಗಿ ಹಾಳಾಗಿದ್ದು ಇನ್ನೇನು ಎಂಬಂತೆ ಬೀಳುವ ಹಂತದಲ್ಲಿದೆ. ಈ ಕಂಬದಲ್ಲಿ ನಾನಾ ಭಾಗದ ತಂತಿಕಂಬಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಒಂದು ವೇಳೆ ತಂತಿಕಂಬ ಮುರಿದು ಬಿದ್ದರೆ ಪಕ್ಕದಲ್ಲೇ ಇರುವ ಕಟ್ಟಡ, ಟೆಂಪೋ ಪಾರ್ಕ್ , ಸಾರ್ವಜನಿಕರ ಮೇಲೆ ಬಿದ್ದು ಭೀಕರ ವಿದ್ಯುತ್ ಅವಘಡ ಉಂಟಾಗಿ ಸಾವು ನೋವು ಸಂಭವಿಸಲೂ ಸಂಭವಿಸಬಹುದು ಎಂಬುವುದು ಸಾರ್ವಜನಿಕರ ಆರೋಪ.
ಕೈಕಂಬ ಮೆಸ್ಕಾಂನ ಪಕ್ಕದಲ್ಲೇ ಇರುವ ತುಕ್ಕು ಹಿಡಿದ ಕಂಬದ ಬಗ್ಗೆ ಈವರೆಗೆ ಮೆಸ್ಕಾಂಗೆ ಹಲವಾರು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇದು ಮೆಸ್ಕಾಂನ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಕೈಕಂಬ ಮೆಸ್ಕಾಂ ವ್ಯಾಪ್ತಿಯಲ್ಲಿ ಹಲವಾರು ವಿದ್ಯುತ್ ಸಮಸ್ಯೆಗಳಿವೆ. ಹಲವು ಬೀದಿ ದೀಪಗಳು ಕಣ್ಣಾಮುಚ್ಚಾಲೆ ಆಡುತ್ತಿವೆ. ಆದ್ದರಿಂದ ಇನ್ನಾದರೂ ಮೆಸ್ಕಾಂ ಅಧಿಕಾರಿಗಳು ಎಚ್ಚರವಹಿಸಿ ಮುಂಬರುವ ಸಂಭಾವ್ಯ ಅನಾಹುತವನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.

 

By Suddi9

Leave a Reply

Your email address will not be published. Required fields are marked *