ಅಮ್ಮುಂಜೆ: ಸರಕಾರದ ವತಿಯಿಂದಲೇ ಉದ್ಯಾನವನ ನಿರ್ಮಿಸಲಿದ್ದು, ಮುಂದಿನ ದಿನಗಳಲ್ಲಿ ಪಂಚಾಯತ್ ವತಿಯಿಂದ ಉದ್ಯಾನವನವನ್ನು ನಿರ್ಮಿಸಬೇಕು ಎಂದು ಅರಣ್ಯ ಸಚಿವ ರಮನಾಥ ರೈ ಅವರು ಪಿಡಿಒ ಅವರಿಗೆ ಸೂಚಿಸಿದರು. ಅವರು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಹಿಂದೂ ರುದ್ರ ಭೂಮಿಗೆ ಮೀಸಲಿಟ್ಟ 3ಎಕರೆ 36 ಸೆನ್ಸ್ ಜಾಗದಲ್ಲಿ ನಡೆದ ಕೋಟಿ ವೃಕ್ಷ ಯೋಜನೆಯ ಅಂಗವಾಗಿ ನಡೆದ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.


ಈ ಭಾಗದಲ್ಲಿ ಸಾಗುವಾನಿ, ಮಾಗೋನಿ, ಹಲಸು, ಮಾವು, ಹೀಗೆ ಹಲವು ರೀತಿಯ ವೃಕ್ಷಗಳನ್ನು ನಾಟಿ ಮಾಡಲು ಪ್ರತಿಯೋರ್ವರೂ ಪರಿಸರವನ್ನು ಉಳಿಸುವ ಸಲುವಾಗಿ ಕಾಡು ಬೆಳೆಸಬೇಕು. ಗಿಡ ನೆಟ್ಟು ಅರಣ್ಯ ಬೆಳೆಸುವ ಸಂಕಲ್ಪ ಕೈಗೊಳ್ಳಬೇಕೆಂದು ವಿನಂತಿಸಿದರು.
ಜಿಲ್ಲಾ ಪಂ. ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಅಮ್ಮುಂಜೆ ಗ್ರಾಮ ಪಂ. ಅಧ್ಯಕ್ಷೆ ಪ್ರೇಮಲತಾ, ತಾ.ಪಂ ಸದಸ್ಯ ಶಿವಪ್ರಶಾದ್ , ಅಮ್ಮುಂಜೆ ಗ್ರಾ. ಪಂ ಉಪಾಧ್ಯಕ್ಷ ವಾಮನ ಆಚಾರ್ಯ, ಪಂ.ಸದಸ್ಯರಾದ ಚಂದ್ರಶೇಖರ ಭಂಡಾರಿ, ಹರೀಶ್, ರಝಾಕ್ ,ಗ್ರಾ. ಪಂ ಸದಸ್ಯೆಯರಾದ ರೋಹಿನಿ, ಲೀಲ, ಭವಾನಿ ಜುಭೇದಾ, ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್ , ಉದ್ಯಮಿ ಉಮೇಶ್, ಸ್ಥಳೀಯರಾದ ಪ್ರಮೋದ್, ಜನಾರ್ದನ ಭಾರಿಂಜೆ ಕಾರ್ಯನಿರ್ವಹಣಾಧಿಕಾರಿ ಮಿರಾಂಧ , ಪಿಡಿಒ ನವೀನ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.


