ಬಂಟ್ವಾಳ : ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಿಲಿಮೊಗರು ಇಲ್ಲಿಗೆ ಉದ್ಯಮಿ ಅಶ್ವತ್ ರೈ ಓಮ ಮತ್ತು ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯ ಕಮಲಾಕ್ಷ ಬರೆಯುವ ಪುಸ್ತಕವನ್ನು ವಿತರಿಸಿದರು ಹಾಗೂ ಇಂಗ್ಲಿಷ್ ಶಿಕ್ಷಕಿಯನ್ನು ನೇಮಿಸುವಂತೆ ಹೇಳಿ ಅವರ ಸಂಬಳದ ಜವಾಬ್ದಾರಿಯನ್ನು ವಹಿಸಿಕೊಂಡರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಿಜಯಕುಮಾರಿಯವರು ಮಕ್ಕಳಿಗೆ ಯೋಗಾಸನ ಮಾಡಲು ಬೇಕಾದ ಜಮಖಾನೆಯನ್ನು ಒದಗಿಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಗಣೇಶ್ ರಾವ್ 70 ಮಕ್ಕಳಿಗೆ ಕೊಳಲು ವಿತರಣೆ ಮಾಡಿದರು. ಜಯಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದರು. ಶಿಕ್ಷಕ ಗಣೇಶ್ ರಾವ್ ಸ್ವಾಗತಿಸಿದರು. ಸಹಶಿಕ್ಷಕ ದೊಡ್ಡಪ್ಪ ವಂದಿಸಿ, ದೈಹಿಕ ಶಿಕ್ಷಕ ಶೇಖರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
