ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಂ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮರಣ ಹೊಂದಿದ ಸಂದರ್ಭದಲ್ಲಿ ಆ ಕುಟುಂಗಳಿಗೆ ಆರ್ಥಿಕ ನೆರವನ್ನು ನೀಡುವ ಸದುದ್ದೇಶದಿಂದ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಷನನ್ನು ಸ್ಥಾಪಿಸಲಾಗಿದೆ. ಡಿಕೆಎಂಎ ಯ ಕಛೇರಿ ಮೊದಲನೇ ಮಹಡಿ ವೆಸ್ಟ್ ಗೇಟ್ ಹೈಟ್ಸ್ ಸ್ಟ್ರರ್ರಕ್ ರೋಡ್, ಪಳ್ನೀರ್ ಮಂಗಳೂರು ನಲ್ಲಿ ಫಲಾನುಭವಿಗಳಿಗೆ ಡಿಕೆಯಂಎ ಗುರುತಿನ ಚೀಟಿ, ಯೊನೋಪೊಯ ಹೆಲ್ತ್ ಕಾರ್ಡ್ ಮತ್ತು ಟಾಟಾ ಡೊಕೊಮೊ ಸಿಮ್ ಕಾರ್ಡ್ ನ್ನು 30 ಮಂದಿಗೆ ಸ್ಥಾಪಾಕಾಧ್ಯಕ್ಷರು ಎಸ್.ಎಮ್.ರಶೀದ್ ಹಾಜಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರವೂಫ್ ಪುತ್ತಿಗೆ, ಕ್ರಿಯಾ ಯೋಜನೆ ಕಾರ್ಯದರ್ಶಿ ಫಾರೂಕ್, ಜಂಟಿ ನಿರ್ದೇಶಕರು ಹರ್ಷದ್, ಸದಸ್ಯರುಗಳಾದ ಮುಹಮ್ಮದ್ ಹಾರಿಸ್, ಮುಹಮ್ಮದ್ ಆಸಿಫ್, ರಿಫಾತ್ ಅಹ್ಮದ್, ಝುಬೈರ್ ಅಂಬರ್ ಮತ್ತು ಟಾಟಾ ಡೊಕೊಮೊ ದ ಮಿಸ್ಬಾಹ್ ಕಮ್ಯೂನಿಕೇಶನ್ ಮಾಲಕ ಮುಸ್ತಫ ಉಪಸ್ಥಿತರಿದ್ದರು.


