ಬಂಟ್ವಾಳ: ಹಿರಿಯರ ಆದರ್ಶಗನ್ನು ಮೈಗೂಡಿಸಿಕೊಂಡು, ಅವರ ಹಾದಿಯಲ್ಲಿ ಮುನ್ನಡೆದು ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಂಟ್ವಾಳ ಬಿ.ಜೆ.ಪಿ ಅಧ್ಯಕ್ಷ ಜಿ.ಆನಂದ ಹೇಳಿದರು. ಅವರು ಬಿಸಿರೋಡಿನ ಬಿಜೆಪಿ, ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
DSC_1371
ಬಿ.ಜೆ.ಪಿ ಪಕ್ಷ ಇಷ್ಟು ದೊಡ್ಡ ಪಕ್ಷವಾಗಿ ಬೆಳೆಯಲು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ ಬಲಿದಾನ ಮಾಡಿದ ಅಂದಿನ ಹಿರಿಯರೇ ಕಾರಣ. ಹಾಗಾಗಿ ಅವರ ಹೆಸರನ್ನು ಜೀವಂತವಾಗಿ ಉಳಿಸಲು ನಮ್ಮ ಮುಂದಿರುವುದು ಅವರ ಕನಸಿನ ಪಕ್ಷವನ್ನು ಉಳಿಸಿ ಬೆಳೆಸಿ ಗಟ್ಟಿಗೊಳಿಸವುದು ಎಂದರು. ಕಾರಕ್ರಮದಲ್ಲಿ ಪುರಸಭಾ ಸದಸ್ಯ ದೇವದಾಸ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಮ್ ದಾಸ ಬಂಟ್ವಾಳ, ದೇವಪ್ಪ ಪೂಜಾರಿ, ಜಿ.ಪಂ.ಸದಸ್ಯರಾದ ಕಮಲಾಕ್ಷಿ ಕೆ.ಪೂಜಾರಿ, ರವೀಂದ್ರ ಕಂಬಳಿ, ತಾ.ಪಂ.ಸದಸ್ಯರಾದ ಗಣೇಶ್ ಸುವರ್ಣ,ನಾರಾಯಣ ಶೆಟ್ಟಿ ಕುಲ್ಯಾರ್ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್,  ನೇಮಿರಾಜ್ ರೈ, ವೆಂಕಟೇಶ ನಾವುಡ, ದಿನೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಅಮ್ಟೂರು ಸ್ವಾಗತಿಸಿ , ತನಿಯಪ್ಪ ಗೌಡ ವಂದಿಸಿದರು

By suddi9

Leave a Reply

Your email address will not be published. Required fields are marked *