‘ದೇಹ ಮನಸ್ಸುಗಳ ಸ್ವಾಸ್ಥ ವೃದ್ಧಿಸುವ ಅದ್ಭುತ ಕ್ರೀಡೆ ಫುಟ್ಬಾಲ್’ – ಕ್ಯಾಸ್ತಲಿಸೋ

‘ಕ್ರಿಕೆಟ್‍ನ ಅತೀವ ಗುಂಗಿನ ಮಧ್ಯೆಯೂ ಫುಟ್ಬಾಲ್ ಕ್ರೀಡೆ ಇಂದು ಜಿಲ್ಲೆಯಲ್ಲಿ ಕೂಡಾ ಜನಪ್ರಿಯಗೊಳ್ಳುತ್ತಿದೆ. ದೇಹ ಮನಸ್ಸುಗಳ ಸ್ವಾಸ್ಥ ವೃದ್ಧಿಸುವ ಅದ್ಭುತ ಕ್ರೀಡೆ ಫುಟ್ಬಾಲ್ ಇಲ್ಲಿ ಮಕ್ಕಳು, ಪುರುಷರು, ಮ”ಳೆಯರು ಎಂಬ ಬೇಧವೂ ಇಲ್ಲ ಡೀಗೋ ಮರಡೋನಾರಂತಹ ಆಟಗಾರರನ್ನು “ಶ್ವ ಮರೆಯಲು ಸಾಧ್ಯವೇ ಇಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ “ದ್ಯಾರ್ಥಿಗಳಿಗೆ ಫುಟ್ಬಾಲ್ ಬಗ್ಗೆ ಸೂಕ್ತ ವ್ಯವಸ್ಥಿತ ತರಬೇತಿ ನೀಡುವ ವ್ಯವಸ್ಥೆಯಾಗಬೇಕು’. ಎಂದು ಕೊಂಕಣಿ ಅಕಾಡೆ”ು ಅಧ್ಯಕ್ಷ ರೋಯ್ ಕ್ಯಾಸ್ತೆಲಿನೋ ಹೇಳಿದರು.
ಅವರು ಮಂಗಳವಾರ ಬಜಪೆ ಸೈಂಟ್ ಜೋಸೆಫ್ ಪದ” ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಬಜಪೆಯ ರೋಯಲ್ ಫುಟ್ಬಾಲ್ ಕ್ಲಬ್ ಇದರ ಆಶ್ರಯದಲ್ಲಿ “ಚಾಂಪಿಯನ್ಸ್ ಟ್ರೋಫಿ 2016′ ಮುಕ್ತ ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತಾನಾಡಿದರು.

26vm football (1)

26vm football (2)

26vm football (3)
ಸಮಾರಂಭದ ಅಧ್ಯಕ್ಷತೆ ವ”ಸಿದ್ದ ಸೈಂಟ್ ಜೋಸೆಫ್ ಪಿಯುಸಿ ಕಾಲೇಜಿನ ಪ್ರಿನಿಪಾಲ್ ಬ್ರ|ಹೆಕ್ಟರ್ ಪಿಂಟೋ ಅವರು ಮಾತನಾಡಿ -“”ಶ್ವ 17ರ ಕೆಳ ಹರೆಯದ ತಂಡದ ಆಯ್ಕೆಯಾಗಿ ಇಲ್ಲಿಗೆ ತಜ್ಞರ ತಂಡ ಆಗ”ುಸಿದಾಗ ಪ್ರತಿಭೆಗಳನ್ನು ಇನ್ನಷ್ಟು ಪಳಗಿಸಿ ಎಂಬ ಸೂಚನೆ ನೀಡಿದ್ದರು. ಫುಟ್ಬಾಲ್‍ನಲ್ಲೂ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದವರೂ ಅನೇಕರು ಈ ಪರಿಸರದಲ್ಲಿದ್ದಾರೆ. ಶಾಲಾ ಕಾಲೇಜು ಮಟ್ಟದಲ್ಲಿ ಮಾತ್ರವಲ್ಲದೆ ಸಾರ್ವಜನಿಕವಾಗಿಯೂ ಫುಟ್ಬಾಲ್ ಪಂದ್ಯಗಳಿಗೆ ಜನಮನ್ನಣೆ ಸಿಗಬೇಕು. ಎಂದು ಅವರು ಹೇಳಿದರು. ಚಾಂಪಿಯನ್ಸ್ ಟ್ರೋಫಿ-2016 ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಒಟ್ಟು 20 ತಂಟಗಳು ಪಾಲ್ಗೊಂಡಿವೆ.
ಬಜಪೆ ಸೈಂಟ್ ಜೋಸೆಫ್ ಚರ್ಚ್‍ನ ಧರ್ಮಗುರು ರೇಫಾ| ಲಿಯೋ ಲೋಬೋ ಶುಭಾಶಂಸಗೈದರು. ದ.ಕ.ಜಿಲ್ಲಾ ಪಂಚಾಯತಿ ಸದಸ್ಯೆ ವಸಂತಿ ಕಿಶೋರ್, ಬಜಪೆ ಗ್ರಾ.ಪಂ- ಅಧ್ಯಕ್ಷೆ ರೋಸಿ ಮಥಾಯಸ್, ಉದ್ಯ”ುಯಗಳಾದ ಸಚಿನ್ ಕ್ರಾಸ್ತಾ, ಓಸ್ವಾಲ್ಡ್ ಪಿಂಟೋ, ರಿಜಾರ್ಡ್ ಮೊಂತೆರೋ, ಬಜಪೆ ಮೋರ್ನಿಂಗ್ ಸ್ಟಾರ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿ| ಸೆಲಿನ್ ಪೇತ್ರಾ, “ಲ್ಡ್ ಕ್ರಾಸ್ತಲಿಯೋ ವೇದಿಕೆಯಲ್ಲಿದ್ದರು ರೋಯಲ್ ಫುಟ್ಬಾಲ್ ಕ್ಲಬ್ ಬಜಪೆ ಇದರ ಅಧ್ಯಕ್ಷ ಲೆಸಿಸ್ಟಿನ್ ಮೊರಾಸ್ ಸ್ವಾಗತಿಸಿ ಕಾರ್ಯದರ್ಶಿ ಶರೀಫ್ ವಂದಿಸಿದರು ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *