ಬಡಹೆಣ್ಮಕ್ಕಳ ಮದುವೆಗೆ ಸಹಕರಿಸುವುದು ಪುಣ್ಯದ ಕೆಲಸ- ಮೊೈದಿನ್ ಬಾವಾ

*ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಹೆಣ್ಮಕ್ಕಳನ್ನು ವರದಕ್ಷಿಣೆ ರಹಿತವಾಗಿ ಮದುವೆಯಾಗಲು ಯುವ ಜನತೆ ಕ್ರಾಂತಿಕಾರಿ ಪಣ ತೊಡಬೇಕು. ಬಡತನದಲ್ಲಿರುವ ಹೆಣ್ಮಕ್ಕಳ ಮದುವೆಗೆ ಸಹಕರಿಸುವುದು ಕೂಡಾ ಒಂದು ಪುಣ್ಯಪ್ರದ ಕೆಲಸ. ಸಾಮಾಜಿಕ ಅಸಮತೋಲನ ಹೋಗಲಾಡಿಸಲು ಯುವ ಸಂಘಟಣೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಕಾರ್ಯಕ್ರಮ ರೂಪಿಸಬೇಕು* ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ.ಮೊೈದಿನ್ ಬಾವಾ ಹೇಳಿದರು.
ಅವರು ಬಾನುವಾರ ಬಜಪೆ-ಸೌಹಾರ್ದ ನಗರ     ಮಸ್ಜಿದುರ್ರಹಮಾನ್ ಮಸ್ಜಿದ್ ನ್ಯೂಸೈಟ್ ಹಾಗೂ ಹಿದಾಯತುಲ್ ಇಸ್ಲಾಂ ಯಂಗ್‍ಮೆನ್ಸ್ ಅಸೋಸಿಯೇಶನ್ ಇವರ ಆಶ್ರಯದಲ್ಲಿ ಸ್ವಲತ್ ವಾರ್ಷಿಕೋತ್ಸವ ಹಾಗೂ 2 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶುಭಾಶಂಸನೆಗೈದು ಮಾತನಾಡಿದರು.



ಉಡುಪಿ ಜಿಲ್ಲೆ ಸಂಯುಕ್ತ ಖಾಝಿ ಶೈಖುನಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಿಕಾಹ್‍ನ ಧಾರ್ಮಿಕ ಪ್ರಕ್ರಿಯೆಗಳು ನಡೆದವು. ಬೊಳ್ಳೂರು ಜೆ.ಎಂ.ನ ಮುಹಮ್ಮದ್ ಅಜ್‍ಹರ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಎಂಜೆಎಂ ಪೇಜಾವರ ಇಲ್ಲಿನ ಖತೀಬರಾದ ಬದ್ರುದ್ಧೀನ್ ಸಖಾಫಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ಧರು.
ಸಂಘಟಕರ ವತಿಯಿಂದ ವಧುವಿನ ತಂದೆಗೆ ತಲಾ 5 ಪವನ ಚಿನ್ನವನ್ನು ಕಾಣಿಕೆಯಾಗಿ ನೀಡಲಾಯಿತು. ಇದೇ ಸಂದರ್ಭ ಉಡುಪಿ ಜಿಲ್ಲೆ ಸಂಯುಕ್ತ ಖಾಝಿ ಶೈಖುನಾ ಬೇಕಲ್ ಇಬ್ರಾಹಿಂ ಮುಸ್ಲಿಯರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಜಪೆ ಮಸೀದಿಯ ಖತೀಬರಾದ ಅಬ್ದುರ್ರಝಾಕ್ ಮದನಿ, ಸೌಹಾರ್ಧನಗರ ಖತೀಬ ಯೂಸೂಫ್ ಸಖಾಫಿ, ಗುರುಪುರ ಜಿ.ಪಂ ಸದಸ್ಯ ಯು.ಪಿ.ಇಬ್ರಾಹಿಂ, ಅವಿಭಜಿತ ದ.ಕ ಜಿಲ್ಲಾ ಮುಸ್ಲೀಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ದ.ಕ ಜಿಲ್ಲೆ ವಕ್ ಬೋರ್ಡ್ ಅಧ್ಯಕ್ಷ ಎಸ್.ರಶೀದ್, ಮಂಗಳೂರು ನಗರಾಭಿವೃದ್ಧಿ ಪ್ರಾಕಾರದ ಆಯುಕ್ತ ಮೊಹಮ್ಮದ್ ನಜೀರ್, ಮಳವೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್, ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಸಾಲಿ ಮುಂತಾದವರು ಉಪಸ್ಥಿತರಿದ್ಧರು.
ಮಹಮ್ಮದ್ ಶರೀಫ್ ಸ್ವಗತಿಸಿ ರಫೀಕ್.ಎಂ ನಿರೂಪಿಸಿದರು

By suddi9

Leave a Reply

Your email address will not be published. Required fields are marked *