ಮಂಗಳೂರು: ಕೇಂದ್ರ ರೈಲ್ವೆ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಶ್ರೀ ಡಿ.ವಿ. ಸದಾನಂದ ಗೌಡ ಮಂಗಳೂರಿಗೆ ಹಲವಾರು ಕೊಡುಗೆಗಳ ಪ್ಯಾಕೇಜ್ ಅನ್ನೇ ಹರಿಸಿದ್ದಾರೆ.
ಅವರ ಪ್ಯಾಕೇಜ್ ಇಂತಿದೆ.
1. ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ರಚನೆ ಮಾಡಿ ಮಂಗಳೂರನ್ನು ಪಾಲ್ಘಾಟ್ ವಲಯದಿಂದ ಪ್ರತ್ಯೇಕಿಸಿ ಹುಬ್ಬಳ್ಳಿ ಅಥವಾ ಮೈಸೂರು ವಲಯಕ್ಕೆ ಸೇರ್ಪಡೆಗೊಳಿಸುವುದು.
2. ಮಂಗಳೂರು ರೈಲ್ವೇ ನಿಲ್ದಾಣವನ್ನು ವಿಶ್ವದರ್ಜೆ ರೈಲ್ವೇ ನಿಲ್ದಾಣವನ್ನಾಗಿ ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸುವುದು.
3. ಹಾಸನ-ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮ  ನಿಯಮ ಸಡಿಲುಗೊಳಿಸಿ ಮಂಗಳೂರು-ಬೆಂಗಳೂರು ಮಧ್ಯೆ ನಿತ್ಯ ಹಗಲು ರೈಲು ಮತ್ತು ಅರಸೀಕೆರೆ ಮೂಲಕ ಒಂದು ಹೊಸ ರೈಲು ಆರಂಭಿಸಬೇಕು.

dv2
4. ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣವನ್ನು ಪ್ರವಾಸೀ ರೈಲ್ವೇ ನಿಲ್ದಾಣವನ್ನಾಗಿ ಪರಿವರ್ತಿಸಿ ಮಂಗಳೂರು ಮೂಲಕ ನವದೆಹಲಿಗೆ ಹೊಸ ರೈಲು ಆರಂಭಿಸಬೇಕು.
5. ಮಂಗಳೂರು-ಸುಬ್ರಹ್ಮಣ್ಯ-ಸುಳ್ಯ-ಮಡಿಕೇರಿ-ಮೈಸೂರು-ಬೆಂಗಳೂರಿಗೆ 2ನೇ ರೈಲು ಮಾರ್ಗ ಸಮೀಕ್ಷೆ
ಮತ್ತು ಆರಂಭಕ್ಕೆ ಯೋಜನೆ ರೂಪಿಸಬೇಕು.
6. ಕರ್ನಾಟಕದಲ್ಲಿ ರೈಲ್ವೇ ಹಬ್ ಆರಂಭಿಸಬೇಕು.
7. ಮಂಗಳೂರು-ಹಾಸನ ರೈಲ್ವೇ ಹಳಿಗಳನ್ನು ದ್ವಿಪಥಗೊಳಿಸಿ ವಿದ್ಯುದ್ದೀಕರಣಗೊಳಿಸಬೇಕು.
8. ಮಂಗಳೂರು-ವಾಸ್ಕೊ ರಾತ್ರಿ ಹೊಸ ರೈಲನ್ನು ಆರಂಭಿಸಬೇಕು.
9. ಉಡುಪಿ-ಮಂಗಳೂರಿನಿಂದ ಹಾಸನ ಮೂಲಕ ತಿರುಪತಿಗೆ ಹೊಸ ರೈಲನ್ನು ಆರಂಭಿಸಬೇಕು.
10. ಭಟ್ಕಳ-ಮಂಗಳೂರು ಆದು ಹೊಗುವ ರೈಲನ್ನು ಸುಬ್ರಹ್ಮಣ್ಯ ರೋಡ್ವರೆಗೂ ವಿಸ್ತರಿಸಬೇಕು.
11. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಆರಂಭಗೊಳ್ಳುವ ಮಂಗಳೂರು-ಮುಂಬೈ ಮತ್ಸ್ಯಗಂಧ
ಎಕ್ಸ್ಪ್ರೆಸ್ ರೈಲಿಗೆ ಮಂಗಳೂರು ಜಂಕ್ಷನ್ನಲ್ಲಿ ನಿಲುಗಡೆ ನೀಡಬೇಕು.
12. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೊಸ ರೈಲ್ವೇ ಲೆವೆಲ್ ಕ್ರಾಸಿಂಗ್, ಓವರ್ ಬ್ರಿಡ್ಜ್ ಮತ್ತು ಅಂಡರ್ ಪಾಸ್ ರಚನೆಯನ್ನು ತ್ವರಿತವಾಗಿ ನಿರ್ಮಿಸಬೇಕು. ಪಡೀಲ್-ಬಜಾಲ್ ರಸ್ತೆ ಮತ್ತು ಮಹಾಕಾಳಿ ಪಡ್ಪು ಬಳಿ ರೈಲ್ವೇ ಅಂಡರ್ಪಾಸ್ ಮತ್ತು ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು.
13. ಕಬಕ-ಪುತ್ತೂರು ರೈಲನ್ನು ರಾತ್ರಿ ಸುಬ್ರಹ್ಮಣ್ಯ ರೋಡ್ ವರೆಗೂ ವಿಸ್ತರಿಸಬೇಕು.
14. ಕಾಣಿಯೂರು-ಕಾಂಞಗಾಡ್ ಹೊಸ ರೈಲು ಮಾರ್ಗ ರಚನೆಗೆ ಚಾಲನೆ ನೀಡಬೇಕು.
15. ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಉತ್ತಮ ಉಪಾಹಾರ, ಗೃಹ ವೈಟಿಂಗ್ ರೂಮ್, ಉತ್ತಮ ಸಂಪರ್ಕ ರಸ್ತೆ, ಸೆಕ್ಯೂರಿಟಿ ವ್ಯವಸ್ಥೆ, ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು.
ಇಷ್ಟೆಲ್ಲಾ ಕೊಡುಗೆಯ ಅನುದಾನವನ್ನು ನೀಡಿದ ಡಿವಿ ಸದನಂದ ಗೌಡ ಮುಂದಿನ ಐದು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *