ಮಂಗಳೂರು; ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಡಿ.ವಿ. ಸದಾನಂದಗೌಡ ಇಂದು ತವರುನಾ ಆಗಮಿಸಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸದಾನಂದಗೌಡರನ್ನು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್ ಆಂಗಾರ ,ಮಾಜಿ ಸಚಿವ ಕ್ರಷ್ಣ ಜೆ ಪಾಲೆಮಾರ್ ಹಾಗೂ ಕಾರ್ಯಕರ್ತರು ಸ್ವಾಗತಿಸದರು .
ಈ ಸಂದರ್ಭ ಮಾತನಾಡಿದ ರೈಲ್ವೆ ಸಚಿವರು, ರೈಲ್ವೆ ಇಲಾಖೆಯಲ್ಲಿ ಸುರಕ್ಷತೆ, ಭದ್ರತೆಗೆ ಆದ್ಯತೆ ನೀಡಲಾಗುವುದು. ಆದರೆ, ಹಿಂದಿನ ಸರ್ಕಾರ ಮಾಡಿರುವ ತಪ್ಪಿನಿಂದ ಈ ಬಾರಿ ರೈಲು ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ, ಈ ಕುರಿತ ಪ್ರಸ್ತಾವೂ ನಮ್ಮ ಬಳಿ ಇದೆ ಎಂದು ಹೇಳಿದರು. ಹೀಗಾಗಿ, ಮುಂದಿನ ದಿನಗಳಲ್ಲಿ ರೈಲ್ವೆ ಪ್ರಯಾಣ ದರ ಏರಿಕೆಯಾಗುವ ಮುನ್ಸೂಚನೆಯ ರೈಲ್ವೆ ಸಚಿವರು ನೀಡಿದ್ದಾರೆ.ಇದೇವೇಳೆ, ರಾಜ್ಯದಲ್ಲಿ ಬುಲೆಟ್ ಟ್ರೈನ್ , ಫಾಸ್ಟ್ ಟ್ರೈನ್ ಓಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದ ಸದಾನಂದಗೌಡ ಪ್ರಧಾನಿ ಮೋದಿ ಕನಸು ನನಸು ಮಾಡುತ್ತೇವೆ ಎಂದರು.