niddodi

ಮಂಗಳೂರು: ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯನ್ನು ರಾಜ್ಯ ಸರಕಾರ ಕೈಬಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಹೇಳಿಕೆ ಹಾಗೂ ಯೋಜನೆಯನ್ನು ರದ್ದುಗೊಳಿಸಲು ಅಸಾಧ್ಯ ಎಂದು ಹೇಳಿರುವ ಮುಖ್ಯಮಂತ್ರಿಗಳ ಹೇಳಿಕೆಗಳು ಜಿಲ್ಲೆಯ ಜನರನ್ನು ಗೊಂದಲಕ್ಕೀಡು ಮಾಡಿ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಈ ಬಗ್ಗೆ ರಾಜ್ಯ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ದ.ಕ ಜಿಲ್ಲಾ ಘಟಕ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿಕೆ ನೀಡಿ ಈ ಯೋಜನೆ ಕೇಂದ್ರ ಸರಕಾರದ್ದು ಆಗಿರುವುದರಿಂದ ನಾವು ನಿಧರ್ಾರ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಹೇಳಿ ಸಮಸ್ಯೆಯನ್ನು ರಾಜಕೀಯಗೊಳಿಸಿ ಜಿಲ್ಲೆಯ ಜನರನ್ನು ಗೊಂದಲಕ್ಕೀಡು ಮಾಡಿರುವರು ಎಂದು ಬಿಜೆಪಿ ಆರೋಪಿಸಿದೆ.
ತಕ್ಷಣ ಜಿಲ್ಲೆಯ 3 ಜನ ಸಚಿವರುಗಳು, ರಾಜ್ಯದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹತ್ತಿರ ಚಚರ್ಿಸಿ ಸರಕಾರದ ನಿಲುವನ್ನು ಪ್ರಕಟಗೊಳಿಸಬೇಕು ಎಂದು ಜಿಲ್ಲಾ ವಕ್ತಾರ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *