ಮಂಗಳೂರು: ಬಿಜೆಪಿ ದ.ಕ ಜಿಲ್ಲಾ ಮಹಿಳಾ ಮೋಚರ್ಾ ವತಿಯಿಂದ ಚುನಾವಣಾ ಅವಲೋಕನ ಸಭೆಯು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮೇ 27ರಂದು ಬೆಳಿಗ್ಗೆ ನಡೆಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋಚರ್ಾದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದಶರ್ಿ ಮಮತಾ ಉದಯ, ರಾಜ್ಯ ಕಾರ್ಯದಶರ್ಿ ಶ್ರೀಮತಿ ಪುಲಸ್ಯ ರೈ, ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಲತಾ ಗಟ್ಟಿ, ಜಿಲ್ಲಾ ಪ್ರ.ಕಾರ್ಯದಶರ್ಿ ಶ್ರೀಮತಿ ಶೈಲಜಾ ಕೆ.ಟಿ ಭಟ್, ಜಿಲ್ಲಾ ಮಹಿಳಾ ಮೋರ್ಚದ ಪ್ರಧಾನ ಕಾರ್ಯದಶರ್ಿ ಶ್ರೀಮತಿ ರೂಪಾ ಡಿ. ಬಂಗೇರ ಹಾಗೂ ಕ್ಷೇತ್ರಗಳ ಅಧ್ಯಕ್ಷ ಪ್ರಧಾನ ಕಾರ್ಯದಶರ್ಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ಮೋರ್ಚದ ಶ್ರೀಮತಿ ಪೂಜಾ ಜಿ. ಪೈ ಪ್ರಾರ್ಥನೆ ಮಾಡಿ, ಶ್ರೀಮತಿ ಕಾತ್ಯಾಯಿನಿ ಸೀತಾರಾಮ್ ಸ್ವಾಗತಿಸಿ, ಶ್ರೀಮತಿ ರಾಜೀವಿ ಕೆಂಪುಮಣ್ಣು ಧನ್ಯವಾದ ನೀಡಿದರು. ಈ ಕಾರ್ಯಕ್ರಮವನ್ನು ಶ್ರೀಮತಿ ಗೌರಿ ನಿರೂಪಿಸಿದರು.

