ಮುಂಬಯಿ: ಅಂಧೇರಿ ಪಶ್ಚಿಮದ ಎಸ್.ವಿ.ರೋಡ್‍ನಇರ್ಲಾ ಅಲ್ಲಿನ ಶ್ರೀ ಆದಮಾರು ಮಠದಲ್ಲಿ ವಾರ್ಷಿಕ ರಾಮ ನವಮಿ-2016ನ್ನು ವಿಜೃಂಭನೆಯಿಂದಆಚರಿಸಲಾಗುತ್ತಿದ್ದು,ಶ್ರೀ ರಾಮನವಮಿ ಉತ್ಸವದ 20ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರು ರಾಮಾ ಯಣ ಪ್ರವಚನನಡೆಸಲಿದ್ದಾರೆ. ಇದೇ ಎ.08ನೇ ಶುಕ್ರವಾರ ದಿಂದ ಎ.15ರ ಶುಕ್ರವಾರ ರಾಮ ನವಮಿ ವರೆಗೆ ಪ್ರತೀದಿನ ಸಂಜೆ 7.00 ರಿಂದ ರಾತ್ರಿ 8.00 ಗಂಟೆಯ ವರೆಗೆ ವಿಶ್ವಪ್ರಿಯ ಸ್ವಾಮೀಜಿ ಅವರು ಶ್ರೀರಾಮಾಯಣ ಪ್ರವಚನ ನೀಡುವರು. ರಾಮ ನವಮಿ ಪೂರ್ವ ಸಿದ್ಧತೆಯಾಗಿಸಿ (ಪ್ರತೀದಿನ ಸಂಜೆ 5.30 ಗಂಟೆಯಿಂದ) ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಎ.08ನೇ ಶುಕ್ರವಾರ ಸಂಜೆ ಗೋಕುಲಕೃಷ್ಣ ಭಜನಾ ಮಂಡಳಿ ಅಂಧೇರಿ ಹಾಗೂ ಗೋಕುಲ ಭಜನಾ ಮಂಡಳಿ ಇವುಗಳು ಹರಿಭಜನೆ, ಎ.09ನೇ ಶನಿವಾರ ಸಂಜೆಗುರು ಸುಕನ್ಯಾ ಭಟ್ ಮತ್ತು ಬಳಗವು ಭರತನಾಟ್ಯ, ಎ.10ನೇ ಭಾನುವಾರ ಸಂಜೆಅಮಿತಾ ಜೈನ್ ತಂಡದಿಂದ ಭರತನಾಟ್ಯ, ಎ.11ನೇ ಸೋಮವಾರ ಸಂಜೆ ವಿದುಷಿ ಚಂದ್ರಿಕಾ ಭಟ್ ಅವರಿಂದ ದೇವರನಾಮ, ಎ.12ನೇ ಮಂಗಳವಾರ ಸಂಜೆ ವಿದುಷಿ ಅರುಣದತ್ತಿ ರಾವ್ ಅವರಿಂದ ಕರ್ನಾಟಕ
ಸಂಗೀತ, ಎ.13ನೇ ಬುಧವಾರ ಸಂಜೆಸಹನಾ ಭರದ್ವಾಜ್ ಅವರಿಂದ ನೃತ್ಯವೈಭವ, ಎ.14ನೇ ಗುರುವಾರ ಸಂಜೆಗುರುರಾಜ ಭಜನಾ ಮಂಡಳಿ ಅವರಿಂದ ಹರಿದಾಸ, ಚೈತನ್ಯ ಮಂತ್ರಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
Adamaru Swamiji - Godಎ.10ನೇ ಶುಕ್ರವಾರ ರಾಮ ನವಮಿ ಪ್ರಯುಕ್ತ ಬೆಳಿಗ್ಗೆ 7.00 ಗಂಟೆಯಿಂದಪಂಚಾಮೃತ ಅಭಿಷೇಕ, 11.30 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 12.00 ಗಂಟೆಯಿಂದಅನ್ನ ಸಂತರ್ಪಣೆ, 1.00 ಗಂಟೆಯಿಂದ ದಿನೇಶ್ ಕೋಟ್ಯಾನ್ ಅವರಿಂದ ಸೆಕ್ಸೋಫೋನ್ ವೈಭವ, ಅಪರಾಹ್ನ 2.00 ಗಂಟೆಯಿಂದಕು| ಕೃತಿ ದಿನೇಶ್ ಚಡಗ ಅವರಿಂದ ಭರತನಾಟ್ಯ, ಸಂಜೆ 4.30 ಗಂಟೆಯಿಂದ ಶ್ರೀನಿವಾಸ ಭಟ್ ಅವರಿಂದ ಹರಿಕಥೆ, 6.00 ಗಂಟೆಯಿಂದ ಪಲ್ಲಕ್ಕಿ ಉತ್ಸವ, ಸಂಜೆ 7.00 ಗಂಟೆಯಿಂದ ವಿಶ್ವಪ್ರಿಯ ಸ್ವಾಮೀಜಿ ಅವರು ಶ್ರೀರಾಮಾಯಣ ಪ್ರವಚನ, ರಾತ್ರಿ 8.00 ಗಂಟೆಗೆ ಮಂಗಳ ಮಂತ್ರಾಕ್ಷಥೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ. ಆ ಪ್ರಯುಕ್ತ ಮಹಾನಗರದಲ್ಲಿನ ಸರ್ವ ಭಕ್ತರೂ ಎಲ್ಲಾ ಪ್ರವಚನ, ಪೂಜಾಧಿಗಳಲ್ಲಿ ಉಪಸ್ಥಿತರಿದ್ದು ಮಹಾ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಹಾಗೂ ಮಠದ ದಿವಾಣರಾದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *