Rakesh Shettigar

28my5

Anish & Rakesh

Kolnad Accident..1

Kolnad Accident..2

Kolnad Accident..3

Kolnad Accident..4

ಸುದ್ದಿ9 ಮುಲ್ಕಿ:ಇಲ್ಲಿನ ಮೂಲ್ಕಿ ನಗರ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿಯವರ ಕಿರಿಯ ಪುತ್ರ ಅನಿಶ್ ಶೆಟ್ಟಿ (17) ಬುಧವಾರ ರಾತ್ರಿ ಮೂಲ್ಕಿ ಬಳಿಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಅಪಘಾತ ಸಂಭವಿಸಿದಾಗ ಅನಿಶ್ ಶೆಟ್ಟಿ (17) ಸ್ಥಳದಲ್ಲಿಯೇ ಮೃತಪಟ್ಟರೇ, ಆತನೊಂದಿಗೆ ಬೈಕ್ನಲ್ಲಿ ಸವಾರನಾಗಿದ್ದ ಚಿತ್ರಾಪು ಗುಂಡಾಲು ನಿವಾಸಿ ರಾಕೇಶ್ ಶೆಟ್ಟಿಗಾರ್ (17) ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಅನಿಶ್ ಶೆಟ್ಟಿ ಹಾಗೂ ರಾಕೇಶ್ ಶೆಟ್ಟಿಗಾರ್ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರಲ್ಲದೇ ಸಹಪಾಠಿಗಳಾಗಿದ್ದರು. ಗುರುವಾರ ರಾಕೇಶ್ನ ಹುಟ್ಟಿದ ಹಬ್ಬದ ದಿನವಾದುದರಿಂದ ಅನéಿಶ್ನ ಅತ್ಯಾಧುನಿಕ ಬೈಕ್ನಲ್ಲಿ ಮೂಲ್ಕಿಯತ್ತ ಸಂಚರಿಸುತ್ತಿದ್ದರು ಮಂಗಳೂರಿನಿಂದ ಬರುತ್ತಿದ್ದ ಮುಡ್ಕೂರು ಮೂಲದ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಅನಿಶ್ ಮೇಲೇ ಕಾರು ಸಂಚರಿಸಿ ದಾರುಣವಾಗಿ ರಸ್ತೆಯಲ್ಲಿಯೇ ಮೃತಪಟ್ಟನು ಎಂದು ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ.
ಬೈಕ್ನ ಹಿಂದೆ ಸವಾರನಾಗಿದ್ದ ರಾಕೇಶ್ ಸಹ ರಸ್ತೆಗೆ ಎಸೆಯಲ್ಪಟ್ಟು ಜೀವನ್ಮರಣದ ಸ್ಥಿತಿಯಲ್ಲಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲ್ಕಿ ನಗರ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹಾಸನದ ಬೇಲೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು ಅಪಘಾತದ ಮಾಹಿತಿ ಪಡೆದ ತಕ್ಷಣ ಮೂಲ್ಕಿಗೆ ಆಗಮಿಸಿದ್ದಾರೆ. ಅವರ ಇಬ್ಬರು ಪುತ್ರರಲ್ಲಿ ಅನಿಶ್ ಎರಡನೇಯವನಾಗಿದ್ದು, ಮೊದಲ ಪುತ್ರ ಇಂಜಿನಿಯರಿಂಗ್ ಪದವಿಯ ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *