ಮೂಲ್ಕಿ, ; ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವ ಇಂಜಿನಿಯರ್ರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಮಂಗಳೂರಿನಲ್ಲಿ ಡಿವೈಎಸ್ಪಿ ಆಗಿರುವ ಬೆರಳಚ್ಚು ತಜ್ಞರಾದ ಹರಿಶ್ಚಂದ್ರ ಹೆಜಮಾಡಿಯವರ ಪುತ್ರ ರೋಶನ್ (25) ಎಂದು ಗುರುತಿಸಲಾಗಿದೆ. ಇವರು ಚಲಾಯಿಸುತ್ತಿದ್ದ ಬುಲೆಟ್ಗೆ ಬಿಜಾಪುರದಿಂದ ಮಂಗಳೂರಿಗೆ ಲಿಂಬೆಹಣ್ಣನ್ನು ತುಂಬಿಸಿಕೊಂಡು ಬರುತ್ತಿದ್ದು ಲಾರಿಯು ಬಪ್ಪನಾಡು ದ್ವಾರದ ಬಳಿಯಲ್ಲಿ ಡಿಕ್ಕಿ ಹೊಡೆದ ಪರಿಣಾಮ ರೋಶನ್ ರಸ್ತೆಗೆ ಎಸೆಯಲ್ಪಟ್ಟು ದಾರುಣವಾಗಿ ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಮಟ್ಟದ ದೇಹದಾಡ್ರ್ಯ ಪಟುವಾದ ಹರಿಶ್ಚಂದ್ರ ಹೆಜಮಾಡಿಯವರು ಕಾಂಚನ್ ಐಸ್ ಪ್ಲಾಂಟ್ ಬಳಿಯ ನಿವಾಸಿಯಾಗಿದ್ದು ಇಬ್ಬರ ಪುತ್ರರಲ್ಲಿ ಹಿರಿಯವನಾದ ರೊಶನ್ ಮೂಲ್ಕಿಯ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿಜಯಾ ಕಾಲೇಜಿನ ಹಳೆ ವಿದ್ಯಾಥರ್ಿ ಆಗಿದ್ದು. ನಿಟ್ಟೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಿನಲ್ಲಿ ಕಳೆದ ವರ್ಷದವರೆಗೆ ಅಕಾಮಯಿ ಟೆಕ್ನೋಲೋಜೀಸ್ ಎಂಬ ಕಂಪೆನಿಯಲ್ಲಿ ಕೆಲಸದಲ್ಲಿದ್ದು ಕಳೆದ ಆಗಸ್ಟ್ 23ರಿಂದ ಬೆಂಗಳೂರಿನ ಫೈರ್ ಐ ಇಂಕ್ ಕಂಪೆನಿಯಲ್ಲಿ ಸೀನಿಯರ್ ಇಂಜಿನಿಯರ್ ಆಗಿದ್ದನು. ರಜೆಯಲ್ಲಿ ಊರಿಗೆ ಬಂದಿದ್ದು ತನ್ನ ಗೆಳೆಯ ಶ್ರವನ್ ಕುಮಾರ್ನೊಂದಿಗೆ ನಿನ್ನೆ ತಡರಾತ್ರಿ ಮಂಗಳೂರಿನಿಂದ ಬುಲೆಟ್ನಲ್ಲಿ ಹೆಜಮಾಡಿಯ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹರಿಶ್ಚಂದ್ರ ಹೆಜಮಾಡಿಯವರ ಮತ್ತೋರ್ವ ಪುತ್ರ ಭೂಷಣ್ ನಿಟ್ಟೆಯಲ್ಲಿ ಇಂಜಿನಿಯರಿಂಗ್ ಪದವಿಯ ವ್ಯಾಸಾಂಗ ಮಾಡುತ್ತಿದ್ದು ಈಗ ಆ ಕುಟುಂಬಕ್ಕೆ ರೋಶನ್ನ ಸಾವು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ
